Wednesday 12 April 2017

Pink Moon ಅನ್ನುವ ಕವಿ ಸಮಯ


ಇತ್ತೀಚೆಗೆ ಒಂದು ಮೂರು ನಾಲ್ಕು ದಿನಗಳಿಂದ ನನ್ನ whatsup ಮತ್ತು ಫೇಸ್ಬುಕ್  ನಲ್ಲಿ ಏಪ್ರಿಲ್ ನಲ್ಲಿ "ಪಿಂಕ್ ಮೂನ್" ಮರೆಯದೆ ನೋಡಿ ಅನ್ನೋ ಮೆಸೇಜ್ ಗಳನ್ನ ನೋಡಿ ನಾನು ಇವತ್ತು ಇದುವರೆಗೂ ಕಾಯ್ತಾ ಕೂತಿದ್ದೆ. ಪಿಂಕ್ ಮೂನ್ ನೋಡೊಕಂತ.  ಆದ್ರೆ ನನಗೆ ನಿರಾಸೆ ಕಾದಿತ್ತು ಎಂದಿನಂತೆ ಚಂದ್ರ ನಂಗೆ ಬಿಳಿಯಾಗೆ ಕಂಡ. :)

ಕೆಲ ಹುಣ್ಣಿಮೆ ದಿನಗಳಲ್ಲೂ - ಎಂದಿನ ಹುಣ್ಣಿಮೆಯಂತೆ ಬೆಳ್ಳಗೇ ಕಂಡರೂ -  ಈ ಚಂದ್ರನನ್ನ ಒಮ್ಮೆಮ್ಮೆ 'ಬ್ಲೂ ಮೂನ್' ಅಂತ ಕರೆದರೆ ಮತ್ತೆ ಈಗ 'ಪಿಂಕ್ ಮೂನ್' ಅಂತಾರೆ. ಯಾಕಪ್ಪ ಈತರ? ಇಂದು ಈ ಚಂದ್ರ ನಿಜಕ್ಕೂ ಗುಲಾಬಿ ಬಣ್ಣದವನಾಗಿರ್ತಾನ ಅತ್ವ ಇದು ಬರಿಯ ಕವಿ ಕಲ್ಪನೆಯ ಅಂತ ಯೋಚನೆ ಮಾಡಿದಾಗ ನನಗೆ ಕಂಡು ಬಂದ ಕೆಲ ವಿಷಯಗಳನ್ನ ಬರೀತಾ ಇದ್ದೀನಿ.

ನಾವು ಅಂದುಕೊಂಡಿರುವಂತೆ ಇವತ್ತು ಚಂದ್ರ ಗುಲಾಬಿ ಬಣ್ಣದಲ್ಲಿ ಕಾಣೋದಿಲ್ಲ. ಪಿಂಕ್ ಮೂನ್ ನ ಇತಿಹಾಸ ಬೇರೆನೇ ಇದೆ.

ನಮ್ಮಲ್ಲಿ ಕಾರ ಹುಣ್ಣಿಮೆ (ಕಾರಬ್ಬ / ಕಾರ ಹಬ್ಬ), ಆಗಿ ಹುಣ್ಣಿಮೆ, ಬನದ ಹುಣ್ಣಿಮೆ, ನೂಲ ಹುಣ್ಣಿಮೆ, ದವನದ ಹುಣ್ಣಿಮೆ, ಸೀಗೆ ಹುಣ್ಣಿಮೆ, ಎಳ್ಳು ಅಮಾವಾಸ್ಯೆ  ಹೀಗೆ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯಗಳಿಗೆ ಹೆಸರು ಕೊಟ್ಟು ಹಬ್ಬ ಆಚರಣೆ ಮಾಡುವ ಪಧ್ಧತಿ ಮೊದಲಿಂದಲೂ ಇದೆ.    ಬಹುಶ ಜಗತ್ತಿನ ಎಲ್ಲ ಹಳೆಯ ಸಂಸ್ಕೃತಿಗಳಲ್ಲೂ ಈ ಪದ್ಧತಿ ಇದೆ ಅನ್ನಬಹುದು. ಮೂಲ ಅಮೆರಿಕನ್ನರೂ (Native Americans) ಸಹಾ ಈ ರೀತಿ ಹುಣ್ಣಿಮೆಯ ಚಂದ್ರನಿಗೆ ಹೆಸರು ಕೊಡುವ ಪದ್ಧತಿ ಹೊಂದಿದ್ದರು ಎಂದು ತಿಳುದು ಬರುತ್ತೆ, ಈ ಮೂಲ ಅಮೆರಿಕನ್ನರ ಆಚರಣೆಗಳ ಮೂಲದಿಂದ ಹುಟ್ಟಿದ್ದೇ ಈ ಪಿಂಕ್ ಮೂನ್ ಅನ್ನುವ ಹೆಸರು.

ನಮ್ಮಲ್ಲಿ "ಕಾರ" ಹುಣ್ಣಿಮೆ (ಕಾರಬ್ಬ), "ಎಳ್ಳು" ಅಮಾವಾಸ್ಯೆ ಇತ್ಯಾದಿ ಹೆಸರುಗಳನ್ನಿಟ್ಟು ಹೇಗೆ ಹುಣ್ಣಿಮೆ ಅಮಾವಾಸ್ಯೆಗಳನ್ನ ಗುರ್ತಿಸ್ತಿದ್ದೆವೋ ಮತ್ತಿವು ನಮ್ಮ ಸಂಸ್ಕೃತಿ ಹಬ್ಬ ಆಚರಣೆಗಳ ಭಾಗವಾಗುತ್ತಿದ್ದವೋ ಅದೇ ರೀತಿ ಮೂಲ ಅಮೆರಿಕನ್ನರ ಸಂಸ್ಕೃತಿಯ ಪಳೆಯುಳಿಕೆಯೇ ಈ "ಪಿಂಕ್ ಮೂನ್" ಅನ್ನುವ ಹೆಸರು!!

ಅಮೇರಿಕದಲ್ಲಿ  ಇಲ್ಲಿ ನಮಗಿರುವಂತೆ ಏಪ್ರಿಲ್ ನಲ್ಲಿ ವಸಂತ ಋತು (ಅವರು ಸ್ಪ್ರಿಂಗ್ ಸೀಸನ್ ಅಂತಾರೆ). ಈ ಋತುವಿನಲ್ಲಿ ಆ ದೇಶದಲ್ಲಿ ಒಂದು ವಿಶೇಷ ಜಾತಿಯ ಮರಗಳು ಗುಲಾಬಿ ಬಣ್ಣದ ಹೂವುಗಳಿಂದ ತುಂಬಿರುತ್ತವೆ. ನಮ್ಮಲ್ಲಿ ಹೇಗೆ ವಸಂತ ಋತು ಎಂದರೆ ಪ್ರಕೃತಿ ಹಸಿರು ತುಂಬಿದಂತೆ   ಕಾಣುವುದೋ ಹಾಗೆ ಮತ್ತು  ನಾವು ವಸಂತ ಋತುವನ್ನು ಹಸಿರು ಬಣ್ಣದ ಸೀರೆಯುಟ್ಟ ಪ್ರಕೃತಿ  ಅಂತ ವರ್ಣಿಸುತ್ತೆವೆಯೋ ಹಾಗೆಯೇ ಈ ಪಿಂಕ್ ಮೂನ್ ಕಲ್ಪನೆ. ಅಸ್ಟೇ.,,. ಅಲ್ಲಿನ ಸ್ಪ್ರಿಂಗ್ ನ   ಕಾಲದಲ್ಲಿ   ಅಲ್ಲಿನ ಕೆಲವು ಜಾತಿಯ ಮರಗಳು ಗುಲಾಬಿ ಬಣ್ಣದ ಹೂವುಗಳಿಂದ  ಕಂಗೊಳಿಸುತ್ತಿರುತ್ತವೆ. ಆಗ ಬರುವ ಮೊದಲ ಬೆಳದಿಂಗಳಿನ ಬೆಳಕು  ಪಿಂಕ್ ಹೂವಿನ ಮೇಲೆ ಬೀಳುವುದರಿಂದ ಆ ಹುಣ್ಣಿಮೆ ಚಂದ್ರನನ್ನು ಪಿಂಕ್ ಮೂನ್ ಎಂದು ಕರೆಯುತ್ತಿದ್ದರು.  ಅಲ್ಲಿನ ಜನರ ವಾಡಿಕೆಯಂತೆ ಮತ್ತು ಅಲ್ಲಿನ ಕವಿಗಳ ಕಲ್ಪನೆಯಂತೆ   ಅವರ ವಸಂತ ಋತುವಿನ ಮೊದಲ ಬೆಳದಿಂಗಳಿನ ಚಂದ್ರನನ್ನು ಪಿಂಕ್ ಮೂನ್ ಅಂತ ವರ್ಣಿಸುತ್ತಾರೆ.  ಹಾಗೆ ಅಲ್ಲಿನ ಕವಿಗಳು ತಮ್ಮ ಪದ್ಯಗಳಲ್ಲಿ ಅವರ ಸ್ಪ್ರಿಂಗ್ ಸೀಸನ್ನ ಮೊದಲ ಹುಣ್ಣಿಮೆ ಚಂದ್ರನನ್ನ  ಪಿಂಕ್ ಮೂನ್ ಎಂದು ತಮ್ಮ ಕವಿತೆಗಳಲ್ಲಿ ವರ್ಣಿಸುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ  ಏಪ್ರಿಲ್ ನ ತಿಂಗಳಿನ ಮೂನ್ ನನ್ನು  ಅಮೇರಿಕಾನಲ್ಲಿ ಪಿಂಕ್ ಮೂನ್ ಎಂದು ಕರೆಯುವ ರೂಢಿ ಶುರುವಾಯಿತು ಎಂದು ಹೇಳಬಹುದು.

ಅಮೇರಿಕಾದ ವಸಂತ ಋತುವಿನಲ್ಲಿ ಪಿಂಕ್ ಬಣ್ಣದಿಂದ ಕಂಗೊಳಿಸುವ ವಿಶೇಷ ರೀತಿಯ ಮರಗಳು :-

ಗೂಗಲ್ಲಿಂದ ಪಿಂಕ್ ಬಣ್ಣದ ಹೂಗಳು ಪಿಂಕ್ ಬಣ್ಣ ಕೊಡುವ ಹೂಗಳು - ಗೂಗಲ್ಲಿಂದ
ಈ ಕೆಳಗಿನ ಪಿಂಕ್ ಮೂನ್ ಮೇಲಿನ ಕವಿತೆ ಸಂತ ಕಾಲವನ್ನು ಮತ್ತು ಆಗ  ಅರಳುವ ಪಿಂಕ್ ಹೂವಿನ ವರ್ಣನೆ ಇದೆ


ಮಂಗಳವಾರ ರಾತ್ರಿ ಪಿಂಕ್ ಮೂನ್ ಗಾಗಿ ಕಾದು ಕುಳಿತು ನಾನು ನನ್ನ ಮೊಬೈಲಲ್ಲಿ ಕ್ಲಿಕ್ಕಿಸಿದ ಚಂದ್ರನ ಕೆಲವು ಪಟಗಳು : 





2 comments:

  1. ನಿಮ್ಮ ಸಂಶೋಧನೆ ಅದ್ಭುತ. ನಿಮಗೆ ಶುಭವಾಗಲಿ.ಹಾಗೆಯೇ ಏಕೆ ಅಮಾವಾಸ್ಯೆ ಮತ್ತು ಹುಣ್ಣಿಮೆಗಳಿಗೆ ಹೆಸರಿಟ್ಟರು ಎಂಬುದನ್ನೂ ವಿವರಿಸಿ ಬರೆಯಿರಿ.

    ReplyDelete
    Replies
    1. ನಿಮ್ಮ ಹಾರೈಕೆಗೆ ಧನ್ಯವಾದಗಳು.

      ಸಂಸ್ಕೃತದಲ್ಲಿ "ಮಾ" ಅಕ್ಷರಕ್ಕೆ "to measure"
      ಅನ್ನೋ ಅರ್ತವಿದೆ.

      ಚಂದ್ರ ನಮ್ಮ ಕಾಲ ಗಣನೆಯಲ್ಲಿ ದೊಡ್ಡಪಾತ್ರ ವಹಿಸಿದ್ದಾನೆ. ನಮ್ಮ ರಾಶಿ - ನಕ್ಷತ್ರ - ತಿಥಿ ಎಲ್ಲ ಲೆಕ್ಕದಲ್ಲೂ ಚಂದ್ರನಿದ್ದಾನೆ. ಚಂದ್ರ ನಮ್ಮ ಕಾಲಗಣನೆಯ "ಮೂಲಮಾನ" unit ಎನ್ನಬಹುದು. ಚಂದ್ರನಿಗೂ "ಮಾ" ಪದ ಅಂಟಿಕೊಂಡಿದೆ. ಮಾಸ ಅಂದ್ರೂನೂ ಚಂದ್ರಾನೇ. ಅಚ್ಚಗನ್ನಡದ "ತಿಂಗಳ" ಅಂದ್ರೂನೂ ಚಂದ್ರನೇ!

      ಪೂರ್ಣಿಮಾ < ಪೂರ್ಣ + ಮಾ > ಚಂದ್ರ ಪೂರ್ಣವಾಗಿರುವ / ತುಂಬು ಚಂದಿರನ ದಿನ.

      ಹುಣ್ಣಿಮೆ < ಪುಣ್ಣಿಮೆ < ಪೂರ್ಣಿಮಾ ದ ತದ್ಭವ. ಅಚ್ಚಗನ್ನಡದಲ್ಲಿ ಬೆಳದಿಂಗಳು.

      ಅ + ಮಾ > ಚಂದ್ರನಿಲ್ಲದ ದಿನ > ಅಮಾವಸಿ.
      ಇದಕ್ಕೆ ಕುವೆಂಪು ಬಳಸಿದ ಪದ .. ಕಾರ್ದಿಂಗಳು


      https://www.jstor.org/stable/616044?seq=1#page_scan_tab_contents

      Delete