Monday 29 February 2016

ಸ್ವರ್ಣ ಬಿಂದು ಪ್ರಾಶನ ಮಕ್ಕಳಿಗೆ ಅದು ಅಮೃತಾನ? / ವಿಷಾನ?

ಸ್ವರ್ಣ ಬಿಂದು ಪ್ರಾಶನ  ಮಕ್ಕಳಿಗೆ   ಅಮೃತಾನ????  / ವಿಷಾನ????????
ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ  ಸ್ವರ್ಣ ಬಿಂದು ಪ್ರಾಶನ ಹನಿಗಳನ್ನು ಮಕ್ಕಳಿಗೆ  ಹಾಕುವ ಹಾಸ್ಪಿಟಲ್ ಮತ್ತು ಬ್ಯಾನರ್ಗಳು ನನ್ನ ತಲೆಗೆ ತುಂಬಾ ಕೆಲಸ ಕೊಟ್ಟಿವೆ. ಇದು ಸರಿನೋ?  ತಪ್ಪೋ?  ಅಂತ ನನ್ನ ಮನಸ್ಸಿನಲ್ಲಿ ಗೊಂದಲದ ಪ್ರಶ್ನೆಗಳು ಮೂಡುತ್ತಿವೆ. ಇದನ್ನು ಹುಟ್ಟಿದ ಮಗುವಿನಿಂದ 16 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪುಷ್ಯ ನಕ್ಷತ್ರದಂದು ಹಾಕಿಸುವುದು. ನಾನು ಕೂಡ ಒಂದೆರೆಡು ಬಾರಿ ಹಾಕಿಸಿದೆ. ಅದಕ್ಕೆ ಕಾರಣ ಬೌಧ್ಧಿಕ ಶಕ್ತಿ ಹೆಚ್ಚಿಸಲು, ಜ್ಞಾಪಕಶಕ್ತಿ, ಮಕ್ಕಳಿಗೆ ತಂತಾನೆ ರೋಗನಿರೋಧಕ ಶಕ್ತಿ ದೇಹ ಬೆಳೆಸಿಕೊಳ್ಳುತ್ತದೆ ಎಂದೂ  ಮತ್ತು ಕೆಲವೊಂದು ಇನ್ಫೆಕ್ಷನ್ ನಿಂದ ಮಕ್ಕಳಿಗೆ ಪ್ರೊಟೆಕ್ಷನ್ ಇದರಿಂದ ಬರುತ್ತೆ  ಎಂದು,  ನನ್ನ ಗೆಳತಿಯರೆಲ್ಲ ಹೇಳುತ್ತಿದ್ದರು. ಕೆಲವೊಂದು ಪಾಂಪ್ಲೆಟ್ಗಳಲ್ಲಿ ಓದಿದ್ದು, ಮತ್ತು ನನ್ನ ಕೆಲವು ಗೆಳತಿಯರ ಸಲಹೆಯ ಮೇರೆಗೆ, ಇಂಟರ್ನೆಟ್ನಲ್ಲಿ ಅದರ ಬಗ್ಗೆ ಇದ್ದ ಮಾಹಿತಿಗಳನ್ನು  ಓದಿ ನಾನು ಸ್ವರ್ಣ ಬಿಂದುವನ್ನು ನನ್ನ ಮಕ್ಕಳಿಗೂ ಹಾಕಿಸಬೇಕೆಂಬ ನಿರ್ಧಾರ ಮಾಡಿ ಎರೆಡು ಬಾರಿ ಹಾಕಿಸಿದ್ದು ಆಯಿತು. ಯಾಕೋ ಕೆಲವೊಮ್ಮೆ ಇದರ ಬಗ್ಗೆ ಆಳವಾಗಿ ಯೋಚಿಸಿದಾಗ ಇದು ಸರಿನೋ? ತಪ್ಪೋ?  ಅನ್ನೋ ಗೊಂದಲಗಳು ಮನಸ್ಸಿನಲ್ಲಿ ಯಾವಾಗಲೂ ಕಾಯಿಕೊರಕ ಹುಳುವಿನಂತೆ ನಂತಲೆ ಕೊರಿತನೆ ಇರುತ್ತೆ.  ಅದಕ್ಕೆ ಇದರ ಅರ್ಥ ಪೂರ್ಣ ಮಾಹಿತಿ ತಿಳಿಯಲೆಬೇಕೆಂಬ ಕುತೂಹಲ ಹೊಂದಿರುವ ತಾಯಿಯಾಗಿ ಮತ್ತು ಎಲ್ಲ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಆರ್ಟಿಕಲ್ ಬರೀತಿದೀನಿ. ಅಮೃತವು ಅತಿಯಾದರೆ ವಿಷವಗುತ್ತೆ ಅನ್ನೋದು ಕೂಡ ಒಂದು ವಾಡಿಕೆ. ಅದೂ ಅಲ್ಲದೆ ಈ ಸ್ವರ್ಣ ಬಿಂದು ಪ್ರಾಶನ ನಮ್ಮ ದೇಶದಲ್ಲಿ ಬಿಟ್ಟರೆ ಬೇರೆ ಯಾವ ದೇಶದ ಮೆಡಿಕಲ್ ಪಧ್ಧತಿಯಲ್ಲೂ ಇದು ಅಂಗೀಕಾರವಾಗಿಲ್ಲ. ಆದ್ದರಿಂದ ಇದು ದುಡ್ಡು ಮಾಡೋ ಜನರ ಇನ್ನೊಂದು ತಂತ್ರವಾ ಎಂದೂ ಒಮ್ಮೊಮ್ಮೆ ಅನಿಸುತ್ತದೆ. ಆರೋಗ್ಯವಂತ ಮಕ್ಕಳೇ ತಾನೆ ನಮ್ಮ ದೇಶದ ಶಕ್ತಿ.




ಸ್ವರ್ಣ ಬಿಂದು ಪ್ರಾಶನ  ಹಾಕಿಸುವುದರಿಂದ ಒಳ್ಳೆಯದಾಗದಿದ್ದರೂ ಪರವಾಗಿಲ್ಲ, ನಮ್ಮ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಆಗಬಾರದು ಎನ್ನುವುದು ನನ್ನ ಆಶಯ. ಕೆಲವೊಂದು ಫ್ರೆಂಡ್ಸ್ ಗಳ ಜೊತೆ ಈ ಬಗ್ಗೆ ಮಾತು ಕಥೆ ನಡೆಸಿದಾಗ ಇದು ಆಯುರ್ವೇದ ಟೆಕ್ನಿಕ್ ಯಾವುದೇ ಕೆಮಿಕಲ್ ಬಳಸಲ್ಲ ನ್ಯಾಚುರಲ್ ಆಗೇ ಮಾಡಿರುತ್ತಾರೆ. ದೇಹಕ್ಕೆ ಬೇಡ ಎನಿಸಿದರೆ ಅದೇ ಹೊರ ಹಾಕುತ್ತೆ ಬಿಡು, ಎಂದು ಹಲವರು ಹೇಳಿದ್ದು ಕೇಳಿ ನಿಟ್ಟುಸಿರು ಬಿಟ್ಟಿದ್ದೆ.  ಆಗ ನಾನೇನೂ  ತಪ್ಪು ಮಾಡಿಲ್ಲ ,ಅದು ಸರಿ ಅಂತ ಅನ್ನುಸ್ತು.

ಸ್ವರ್ಣ ಬಿಂದು ಪ್ರಾಶನದ ಬಗ್ಗೆ ಇಂಟರ್ನೆಟ್ ನಲ್ಲಿ ನಾನು ಓದಿದ ಮಾಹಿತಿ----
ಕಶ್ಯಪ ಮತ್ತು ವಾಗಭಟ  ಮುನಿಗಳು ತಮ್ಮ ಶ್ಲೋಕಗಳಲ್ಲಿ  ಚಿನ್ನದ ಭಸ್ಮದ ಬಗ್ಗೆ, ಚಿನ್ನದ ಅಂಶದ ಮಹತ್ವದ ಬಗ್ಗೆ   ತಮ್ಮ ಶ್ಲೋಕಗಳಲ್ಲಿ  ಹೀಗೆ ಹೇಳಿದ್ದಾರೆ.

1. ವಾಗ್ ಭಟ- ರವರ, ಅಷ್ಟಾಂಗ ಹೃದಯಂ ನ 7ನೇ  ಪಾಠದಲ್ಲಿ  ಹೀಗೆ ಹೇಳಿದ್ದಾರೆ. " ನ ಸಜ್ಜತೆ ಹೇಮಪಂಗೆ ಪದ್ಮಪತ್ರೆ ಅಂಬುವತ್ ವಿಶ0 || " -ಇದರ ಅರ್ಥ ವಿವರಣೆ ಹೀಗಿತ್ತು - ಯಾವುದೇ ವ್ಯಕ್ತಿ ಚಿನ್ನದ ಭಸ್ಮ ತುಂಬಾ ದಿನಗಳವರೆಗೆ ಸೇವಿಸುತ್ತನೋ  ಅವನಿಗೆ  ವಿಷವು ಕೂಡ  ಕೆಡುಕು ಮಾಡುವುದಿಲ್ಲ. ಅದು ಹೇಗೆಂದರೆ ತಾವರೆ ಎಲೆ ಹೇಗೆ ನೀರು ಅಂಟಿಕೊಳ್ಳದಂತೆ  ಸುರಕ್ಷಿತವಾಗಿರುತ್ತೋ  ಹಾಗೆ ಆತನನ್ನು ಕಾಪಾಡುತ್ತದೆ. ಆ ವ್ಯಕ್ತಿ ದೀರ್ಘಾಯು ಹೊಂದುತ್ತಾನೆ.

2. ಕಷ್ಯಪಾಚಾರ್ಯ- ರ (ಕಶ್ಯಪ ಸಂಹಿತ, ಸೂತ್ರಸ್ಥಾನಮ್ ) ನಲ್ಲಿ ಹೀಗೆ ಇದೆ. 
ಸುವರ್ಣ ಪ್ರಾಶನಂ ಹಿ ಏತತ್ ಮೇಧಾಗ್ನಿ ಬಲ ವರ್ಧನಂ | ಆಯುಷ್ಯಂ ಮಂಗಲಂ ಪುಣ್ಯಂ ವೃಶ್ಯಾಂ  ಗ್ರಹಾಪಹಂ || ಮಾಸಾತ್ ಪರಂ ಮೇಧಾವೀ ವ್ಯಾಧಿಭಿರ್ನ್ ಚ ದೃಷ್ಯತೆ | ಷಢಭಿ ಮಾಸೈ ಶ್ರುತಧರ್  ಸುವರ್ಣ ಪ್ರಾಶನಾತ್ ಭವೇತ್ || -ಇದರ ಅರ್ಥ ಸುವರ್ಣಬಿಂದು ಪ್ರಾಶನ ಮನುಷ್ಯನನ್ನು ಮೇಧಾವಿಯನ್ನಾಗಿಸುತ್ತದೆ. ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಪ್ರತಿ ತಿಂಗಳು ತೆಗೆದುಕೊಂಡರೆ ರೋಗ ನಿರೋಧಕ ಶಕ್ತಿ ಬರುತ್ತೆ. ಕೆಟ್ಟ ಅಂಶಗಳು ಹೊರಹೋಗುತ್ತವೆ. 6 ತಿಂಗಳುಗಳ ಕಾಲ ಮಗುವಿಗೆ ಪ್ರತಿದಿನ  ಹಾಕಿಸಿದರೆ  ಮಗುವಿಗೆ ಕೇಳಿಸಿಕೊಳ್ಳುವ ಮತ್ತು ಕೇಳಿಸಿಕೊಂಡಿದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ವೃಧ್ಧಿ ಯಾಗುತ್ತದೆ.


ಇದನ್ನು ಓದಿದ ಮೇಲೂ ನನ್ನ ಮನಸ್ಸಿನ ಗೊಂದಲಗಳು ಕಡಿಮೆಯಾಗಲಿಲ್ಲ. ಇದನ್ನು ಚರ್ಚಿಸಲು ನನಗೆ ಹೊಳೆದ ವ್ಯಕ್ತಿ ನನ್ನ ನಾದಿನಿ, ಅವಳ  ಗಂಡ ಡಾಕ್ಟರ ಆಗಿದ್ದು, MD ಮಾಡುತ್ತಿದ್ದಾರೆ. ಅವರಿಗೂ ಒಂದು ಮಗು ಇದೆ. ನೋಡೋಣ ಅವರು ಹಾಕಿಸುತ್ತಿದ್ದಾರ ಎಂದು ಅವಳನ್ನು ಸ್ವರ್ಣ ಬಿಂದು ಪ್ರಾಶನ ನಿನ್ನ ಮಗಳಿಗೆ ಹಾಕಿಸುತ್ತೀಯಾ?  ಎಂದು ಕೇಳಿದೆ. ಅವಳಿಗೆ ಅದೇನು ಅಂತಾನು ಗೊತ್ತಿಲ್ಲ!!!!!! ನಮ್ಮ ಮನೆವ್ರನ್ನ ಕೇಳಿ ಹೇಳ್ತೀನಿ ಅಂತ ಹೇಳಿದಳು. ಮಾರನೇ ದಿನ ಆಕೆಯ ಕಾಲ್ ಬಂತು. ಆಕೆಯ ಡಾಕ್ಟರ್ ಗಂಡ  ಕೊಟ್ಟ ಉತ್ತರ ಹೀಗಿತ್ತು. ಏನೆಂದರೆ ಕೆಲವೊಂದು ಲೋಹಗಳು ದೇಹಕ್ಕೆ ಬೇಕು ಅದು ಮಿಲಿ ಗ್ರಾಂನಷ್ಟು ಮಾತ್ರ. ಅದು ಅತಿಯಾದರೆ ದೇಹಕ್ಕೆ ಅಪಾಯ ಖಂಡಿತ. ಅವರಿಗೆ ಆಯುರ್ವೇದದಲ್ಲಿ ನಂಬಿಕೆ ಇಲ್ಲವೆಂದು ಮತ್ತು ಹಳೆ ಕಾಲದ ಯಾವುದೊ ಪುಸ್ತಕದಲ್ಲಿ ಬರೆದ ಥಿಯರಿ ಅಥವಾ ಶ್ಲೋಕದಲ್ಲಿರುವುದನ್ನು ಸರಿಯಾಗಿ ಪರೀಕ್ಷಿಸದೆ ಹಾಗೆ ತಂದು ಮೆಡಿಸಿನ್ ಅಂತ ಹೇಳ್ತಾರೆ. ಅದನ್ನ ಓದುವವರು ಕಮ್ಮಿ ಮತ್ತು ಅಲ್ಲಿ ಪ್ರಯೋಗಗಳು ಕೂಡ ಕಮ್ಮಿ, ಆದರೆ ಇಂಗ್ಲಿಷ್ ಮೆಡಿಸಿನ್ನಲ್ಲಿ ರಿಸರ್ಚ್ ಮಾಡುವಸಸ್ಟ ರಿಸರ್ಚ್ ಆಯುರ್ವೇದ ದಲ್ಲಿ ನಡೆಯುವುದಿಲ್ಲ, ಇಂಗ್ಲಿಷ್ ಮೆಡಿಸಿನ್ನಲ್ಲಿ   ಫಂಡ್ ಇದೆ ಸಾಕಸ್ತು ರಿಸರ್ಚ್ ನಡೆದ ನಂತರ ಇಲ್ಲಿ ಯಾವ್ದು ಸರಿ, ಯಾವ್ದು ತಪ್ಪು, ಅಂತ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಮೆಡಿಕಲ್ ಗೆ ಸಂಬಂಧಿಸಿದ ಸಂಘಟನೆಗಳ ಒಪ್ಪಿಗೆಯ ಮತ್ತು ರಿಸರ್ಚ್ ಆಧಾರಗಳ ಮೇಲೆ ಹೇಳುತ್ತಾರೆ. ಏನಾದರೂ ಸೈಡ್ ಎಫೆಕ್ಟ್ ಆಗುತ್ತೋ ಅದರ ಬಗ್ಗೆ ನಾವು ಪೇಷಂಟ್ಗೆ ತಿಳಿಸುತ್ತೇವೆ. ಸೈಡ್ ಎಫೆಕ್ಟ್  ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸುತ್ತೇವೆ. ಕೆಲವೊಂದು ಮೆಟಲ್ಸ್ ಕೂಡ ಕೆಲವರ ದೇಹಕ್ಕೆ ಅಲರ್ಜಿಕ್ ಆಗಿರುತ್ವೆ ಅಥವಾ ದೇಹದಲ್ಲಿ ಅವುಗಳ ಪ್ರಮಾಣ  ಸಮತೋಲನದಲ್ಲಿರುತ್ತೆ.  ಅವನ್ನು ಪರೀಕ್ಷಿಸಿದ ನಂತರವೇ ಕೊಡಬೇಕು ಇಲ್ಲವಾದಲ್ಲಿ ಈಗ ಇಲ್ಲ ಅಂದ್ರೂ ಫ್ಯೂಚರ್ ನಲ್ಲಿ ಅಪಾಯ ತಪ್ಪಿದ್ದಲ್ಲ. ಸ್ವರ್ಣ ಬಿಂದು ಪ್ರಾಶನದ ಬಗ್ಗೆ ಎಷ್ಟು ರಿಸರ್ಚ್ ಆಗಿದೆ ಅಂತ ತಿಳಿದುಕೊಂಡು ಅದರ ಮೇಲೆ ನಿಮಗೆ ನಂಬಿಕೆ ಬಂದ್ರೆ, ಬೇಕೆನಿಸಿದರೆ ಹಾಕ್ಸಿ ಎಂಬುದು ಅವರ ಹೇಳಿಕೆಯಾಗಿತ್ತು. ಮಕ್ಕಳಿಗೆ ಒಳ್ಳೇ ಆಹಾರ ವನ್ನ ಹೊತ್ತಿಗೆ ಸರಿಯಾಗಿ ಊಟ ಮಾಡ್ಸಿ ,ಊಟದಲ್ಲಿ ಎಲ್ಲಾ ರೀತಿಯ ತರಕಾರಿ, ಬೇಳೆ ,ಹಸಿರು ತರಕಾರಿ ,ತಾಜಾ ಹಣ್ಣು ಹಾಲು  ಇವುಗಳನ್ನ ತಿನ್ನಿಸಿ ಕುಡಿಸಿ, ಸಾಕು. ನಾವು ತಿನ್ನುವ ಆಹಾರದ ಮೂಲಕವೆ ದೇಹಕ್ಕೆ ಬೇಕಾದ ಎಲ್ಲ ಅಂಶಗಳು ಸಿಗುತ್ತವೆ. ಎಂಬುದು ಅವರ ವಿವರಣೆ ಯಾಗಿತ್ತು. ಮಕ್ಕಳು  ಹೆಚ್ಚು ನೀರು ಕುಡಿಯಲು ಪ್ರೇರೇಪಿಸಿ ಎಂದರು.




 ಆದರೂ ನಾನು ಬಿಡದೆ  ನಿಮ್ಮ ಮಗಳಿಗೆ ಸ್ವರ್ಣ ಬಿಂದು ಹಾಕಿಸ್ತೀರಾ  ಅಂತ ಕೇಳಿದ್ರೆ ಅವರಿಗೆ ಆಯುರ್ವೇದ ದಲ್ಲಿ ನಂಬಿಕೆಯಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ರು. ಆಯುರ್ವೇದ ಒಂದು ಮೆಡಿಸಿನ್ ಪದ್ಧತಿ ಅಲ್ಲ ಎನ್ನುವುದು ಅವರ ವಾದವಾಗಿತ್ತು. ಅವರ ಪ್ರಕಾರ ಅಲ್ಲಿ ರಿಸರ್ಚ್ ಕಮ್ಮಿ ಹಳೆ ಪುಸ್ತಕದಲ್ಲಿ ಯಾವ್ದೋ ಒಂದು ಶ್ಲೋಕ ದಲ್ಲಿ ಬರೆದಿರುವುದೇ ಸರಿ ಎಂದು ವಾದ ಮಾಡಿ ನಮ್ಬಿಸ್ತಾರೆ  ಪ್ರಯೋಗಿಸಿ ನೋಡೋ ವ್ಯವಧಾನ ಅಲ್ಲಿಲ್ಲ ಎನುವುದು ಅವರ ವಾದ. ಈ ಮಾತು ಕೇಳಿದಾಗ  ನನಗನ್ನಿಸಿದ್ದು ಹೌದಲ್ವ? ಇವಾಗದ್ರೂ ರಿಸರ್ಚ್ ಮಾಡೋಕೆ ಸಾಕಗುವಸ್ತು ಟೆಕ್ನಾಲಜಿ ಇದೆ. ಆಗಿನಕಾಲದಲ್ಲಿ ಇದರ ಬಗ್ಗೆ ರಿಸರ್ಚ್ ಆಗಿತ್ತ? ಅನ್ನೋ ಇನ್ನೊಂದು ಪ್ರಶ್ನೆ ನನ್ನ ತಲೆಗೆ ಬಂತು.


ಇನ್ನು ಕೆಲವರು ಹೇಳುವ ಹಾಗೆ ತಾಮ್ಬ್ರದ ತಂಬಿಗೆಯಲ್ಲಿ ರಾತ್ರಿ  ನೀರು ತುಂಬಿಸಿ  ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿದರೆ ಆರೋಗ್ಯ ಹೆಚ್ಚಾಗುತ್ತೆ ಎಂದು ಹೇಳುತ್ತಾರೆ. ಚಿನ್ನದಂತೆ ಅದು ಕೂಡ ಒಂದು ಲೋಹ ಅದರ  ಬಗ್ಗೆ ತಿಳಿಯೋಣ ವೆನಿಸಿ ಹುಡುಕಾತ್ತಾ ಹೋಗಿ ಇನ್ನೇನೋ ವಿಷಯಗಳು ಕಣ್ಣ ಮುಂದೆ ಬಂದು ನಿಂತವು , ಒಂದು ಕರಾಳ ಇತಿಹಾಸವೇ ಕಣ್ಣಮುಂದೆ ಬಂದು ನಿಲ್ತು. ಅದೇನು ಅಂದ್ರೆ ಹಿಂದಿನ ಕಾಲದಲ್ಲಿ ಒಂದು ರೋಗ ಇತ್ತು. ಹೊಟ್ಟೆ ಡುಮ್ಮ ಕೈ ಕಾಲು ಸಣ್ಣ ಇದನ್ನು ಹೊಟ್ಟೆ ನರಗಟ್ಟು ರೋಗ, ಯಕೃತ್ ರೋಗ, ( Indian childhood syndrome )  ಎಂದೂ ಕರೆಯುತ್ತಿದ್ದರು.ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಬರುತ್ತಿತ್ತು. ಈ ರೋಗ ಬಂದ್ರೆ ಮಕ್ಕಳು ಸತ್ತೆ ಹೋಗ್ತಿದ್ರು. ಈ ರೋಗದ ಲಕ್ಷಣಗಳು ಕೈ, ಕಾಲು ,ಮುಖ, ತೆಳ್ಳಗೆ ಇದ್ದು ಹೊಟ್ಟೆ ಭಾಗ ಮಾತ್ರ  ದಪ್ಪವಾಗುತ್ತಾ ಗುಂಡಗೆ ಊದಿಕೊಳ್ಳುತಿತ್ತು.  ಜ್ವರ ,ರಕ್ತಹೀನತೆ, ತಿಂದದ್ದು ಮೈಗೆ ಹತ್ತದೆ, ನಂತರ ಕಾಮಾಲೆ ರೋಗ ಬಂದು ಕೋಮ ಸ್ಥಿತಿ ಬಂದು ಮಕ್ಕಳು ಸಾಯುತ್ತಿದ್ದವು. ಇದು ಭಾರತದಲ್ಲಿ ಹೆಚ್ಚಾಗೆ ಕಂಡುಬಂದಿದ್ದರಿಂದ ಇದನ್ನು (Indian childhood syndrome) ಎಂದು ಕರೆಯುತ್ತಿದ್ದರು.

1979 ರಲ್ಲಿ ಇಂಗ್ಲೆಂಡ್ ನಲ್ಲಿ ದೇಹಕ್ಕೆ ಬೇಕಾಗುವ ಲಘು ಪ್ರಮಾಣದ ಖನಿಜಗಳ ಬಗ್ಗೆ ಒಂದು ರಿಸರ್ಚ ನಡೆಯುತ್ತೆ.. ಅವರ ಪ್ರಕಾರ ಅಯೋಡೀನ್(iodine), ಫ್ಲೂರಿನ್(florin), ಮಾಲಿಬ್ದಿನಂ(molybdenum), ಜಿನ್ಕ(Zink), ಕೊಬಾಲ್ಟ್(cobalt), ತಾಮ್ರ(cop  per), ಮ್ಯಾಂಗನೀಸ್(manganese),ಇನ್ನು ಮುಂತಾದವು.  ಈ ಲೋಹಗಳೆಲ್ಲ ನಮ್ಮ ದೇಹಕ್ಕೆ ಮಿಲಿ ಗ್ರಾಂ ಗಳ ಪ್ರಮಾಣದಲ್ಲಿ ಮಾತ್ರ ದೇಹಕ್ಕೆ ಬೇಕು ಇವು ಕಮ್ಮಿಯಾದರೂ ಕಷ್ಟ ,ಹೆಚ್ಚಾದರು ಕಷ್ಟ ಅನ್ನೋ ವಿಷಯವನ್ನು  ತಮ್ಮ ರಿಸರ್ಚ್ ಮೂಲಕ ಜಗತ್ತಿಗೆ ತಿಳಿಸುತ್ತಾರೆ.


ಟ್ಯಾನ್ಸನ್ ಹಾಗು ಪೂಪ್ಪರ್ ಎಂಬ ವೈದ್ಯ ವಿಜ್ಞಾನಿಗಳು ಭಾರತದ ಹೊಟ್ಟೆ ಡುಮ್ಮ ಕೈಕಾಲ್ ಸಣ್ಣ ರೋಗದಿಂದ ಸತ್ತ ಮಕ್ಕಳನ್ನು ಪರೀಕ್ಷಿಸಿದಾಗ  ಅತಿ ಹೆಚ್ಚಿನ ಪ್ರಮಾಣದ ತಾಮ್ರ ಆ ಮಕ್ಕಳ ದೇಹದಲ್ಲಿರುವುದು ತಿಳಿಯುತ್ತದೆ. ಹೊಟ್ಟೆಯಲ್ಲಿ ಮಾತ್ರವಲ್ಲದೆ ರಕ್ತ, ಮೂತ್ರ ,ಉಗುರು, ಕೂದಲಿನಲ್ಲು ತಾಮ್ರದ  ಅಂಶ ಹೆಚ್ಚಾಗಿ ಶೇಖರಣೆಯಾಗಿರುವುದು ತಿಳಿದು ಬರುತ್ತದೆ. ಈ ಮಕ್ಕಳಲ್ಲಿ ತಾಮ್ರ ಅಂಶ ಹೇಗೆ ಸೇರಿತು ಎಂಬದನ್ನು ತಿಳಿಯ ಹೊರಟಾಗ ಸಿಕ್ಕಿದ್ದು ತಾಯಿಯ ಎದೆ ಹಾಲು ಸಾಕಾಗದ ಮಕ್ಕಳಿಗೆ, ಮತ್ತು ಸ್ವಲ್ಪ ದೊಡ್ಡ ಮಕ್ಕಳಿಗೆ  ಹಸು, ಎಮ್ಮೆಯ ಹಾಲು ಒಳ್ಳೆಯದು ಎಂದು ಅದನ್ನು ಬಿಸಿಮಾಡಿ  ಕುಡಿಸುತ್ತಿದ್ದರು. ಆ ಹಾಲು ಕಾಯಿಸುವ ವಸ್ತು ಹಿತ್ತಾಳೆ ಎಂಬ ಮಿಶ್ರ ಲೋಹ ವಾಗಿತ್ತು .ಇದು ಎರೆಡು  ಭಾಗ ತಾಮ್ರ ಒಂದು ಭಾಗ ಸತುವಿನಿಂದ ತಯಾರಾದ ಲೋಹವಾಗಿತ್ತು.. ಹಾಲು ಕಾಯಿಸಿದಾಗ ತಾಮ್ರದ ಅಂಶ ಕರಗಿ ಹಾಲಿನೊಡನೆ ಮಕ್ಕಳ ದೇಹ ಸೇರಿ ಮಕ್ಕಳ ದೇಹದಲ್ಲಿ ಈ ವಿಚಿತ್ರ ರೋಗ ಹುಟ್ಟಲು ಕಾರಣವಾಗಿತ್ತು. ಈ ಅಂಶವು ವಿಜ್ಞಾನಿಗಳ ಮೂಲಕ ಬೆಳಕಿಗೆ ಬಂದು, ದಿನಪತ್ರಿಕೆಗಳಲ್ಲಿ ಈ ಮಾಹಿತಿಯನ್ನು ಹಾಕಲಾಗುತ್ತೆ. ನಂತರ ಹಿತ್ತಾಳೆ ಪಾತ್ರೆಯಲ್ಲಿ ಅಡುಗೆ ಮಾಡುವದನ್ನು ಪೂರ್ತಿಯಾಗಿ ನಿಲ್ಲಿಸಲಾಯಿತು. ಸ್ಟೇನ್ಲೆಸ್ ಸ್ಟೀಲ್ ಮತ್ತು ಮಣ್ಣಿನ ಮಡಿಕೆಗಳನ್ನ  ಅಡುಗೆಗೆ ಬಳಸಲು ಮುಂದಾದರು ಹಾಗೆ ಸಮಾಜದಲ್ಲಿದ್ದ  ಒಂದು ಮಾರಣಾoತಿಕ ಕಾಯಿಲೆ ಸದ್ದಿಲ್ಲದೇ ಯಾವ ಚಿಕಿತ್ಸೆ ಇಲ್ಲದೆ ತಂತಾನೇ ಹೊರಟು ಹೋಗುತ್ತೆ. ತಾಮ್ರ ನಮ್ಮ ದೇಹಕ್ಕೆ ಅತ್ಯಲ್ಪ ಪ್ರಮಾಣದಲ್ಲಿ ಬೇಕಾಗಿದ್ದು ಅದು ನಮ್ಮ ಆಹಾರದ ಮೂಲಕವೇ ನಮ್ಮ ದೇಹಕ್ಕೆ ಸೇರುತ್ತದೆ. ಇದಕ್ಕಾಗಿ ವಿಶೇಷವಾಗಿ ದೇಹಕ್ಕೆ ಸೇರಿಸುವ ಅವಶ್ಯಕತೆ ಇರುವುದಿಲ್ಲ.


ಈ ವಿಷಯ ಓದಿದ ಮೇಲೆ ತಾಮ್ಬ್ರ ದಂತೆ ಚಿನ್ನವು ಕೂಡ ಒಂದು ಲೋಹವೇ,  ಅದೂ ಕೂಡ ನಮ್ಮ ಮಕ್ಕಳ ದೇಹದಲ್ಲಿ ಹೆಚ್ಚಾಗೆ ಸೇರಿ ಬೇರೆ ಏನೋ ದುಷ್ಪರಿಣಾಮಗಳಾದರೆ ಅನ್ನೋ ಗೊಂದಲ ಒಂದೆಡೆ ,,ಅದು ಮಕ್ಕಳ ದೇಹಕ್ಕೆ ಒಳ್ಳೇದೆ ಮಾಡುತ್ತಾದರೆ ನಾನು ನನ್ನ ಮಕ್ಕಳಿಗೆ ಹಾಕಿಸದೆ  ಸುಮ್ಮನೆ ಇರೋಕು ನನ್ನ ಕೈಲಿ ಆಗ್ತಿಲ್ಲ ,,,,ಈ ಗೊಂದಲದಲ್ಲಿ  ನಾನಿದಿನಿ ಯಾರಿಗಾದರೂ ಇದರ ಬಗ್ಗೆ ಪೂರ್ಣ ಮಾಹಿತಿ ಇದ್ರೆ ,,ಇದರ ಬಗ್ಗೆ ಆಗಿರುವ ರಿಸರ್ಚ್ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಇದ್ರೆ  ದಯವಿಟ್ಟು ತಿಳಿಸಿ.



ಹಿಂದಿನ ಕಾಲದಲ್ಲಿ ಜನರಿಗೆ ಅರಿವಿಲ್ಲದೆ ಮಕ್ಕಳ ದೇಹಕ್ಕೆ ತಾಮ್ರ ಸೇರಿಸಿ ತಮ್ಮ ಮಕ್ಕಳ ಸಾವಿಗೆ ತಾವೇ ಕಾರಣರಾಗಿದ್ದರು.  ನಾವು ಕೂಡ ಮಾದ್ಯಮಗಳ ಮೂಲಕ ಸಿಗುವ ಬಿಟ್ಟಿ  ಪ್ರಚಾರಗಳ ಮೊರೆ ಹೋಗಿ ನಮ್ಮ ಮಕ್ಕಳಿಗೆ ಯಾವುದನ್ನೂ ಕುರುಡಾಗಿ ನಂಬದೆ, ಯೋಚಿಸದೆ, ಹಾಕಿಸುವುದು ಬೇಡ ಅನ್ನೋದು ನನ್ನ ನಿರ್ಧಾರ. ಅಂದು ತಾಮ್ರ ಇಂದು ಚಿನ್ನ ಇನ್ನು ನನ್ನಲ್ಲಿ ಚಿನ್ನದ ಬಗ್ಗೆ ಭಾರಿ ಅನುಮಾನಗಳಿವೆ ಇದನ್ನು ಹೇಗೆ ಸರಿಪಡಿಸಿಕೊಳ್ಳಲಿ?. ಸ್ವರ್ಣ ಬಿಂದು ಪ್ರಾಶನ ಒಳ್ಳೆಯದೇ ಆಗಿದ್ದಲ್ಲಿ  ನನ್ನ ಮಕ್ಕಳಿಗೆ ಹಾಕಿಸಲೇಬೇಕು ಅನ್ನೋ ಅಸೆ... ,,ಅದು ದೇಹಕ್ಕೆ ಜಾಸ್ತಿ  ಆಗಿ ಬೇರೆ ಅಪಾಯಕಾರಿ ರಿಯಾಕ್ಷನ್ ಆದ್ರೆ??? ಅದನ್ನು ಹಾಕಿಸಿ ಹೀಗಾಯ್ತಲ್ಲ ಅನ್ನೋ ಹಾಗೆ ಆಗಬಾರದು. ಈ ನನ್ನ ಗೊಂದಲ ಹೋಗಲಾಡಿಸಿಕೊಳ್ಳುವುದು  ಹೇಗೆ????????? 

Monday 15 February 2016

ಗುರುತ್ವಾಕರ್ಷಣ ಅಲೆಗಳು - ಏನು - ಎತ್ತ?


ಏನು ಸುದ್ದಿ?
ಮೊನ್ನೆ ಗುರುವಾರ ಅಂದ್ರೆ ಫೆಬ್ರವರಿ ೧೧ ರಿಂದ ಎಲ್ಲ ಕಡೆ ತುಂಬಾ ಚರ್ಚೆಯಾಗುತ್ತಿರುವ ವಿಷಯ ಏನಪಾ ಅಂದ್ರೆ - ಗ್ರಾವಿಟೇಶನಲ್ ವೇವ್ಸ್ ನ್ನು ಪತ್ತೆ ಮಾಡಿರುವುದು. ಗುರುತ್ವಾಕರ್ಷಣ ಅಲೆಗಳುಅಂತ ನಾವು ಪುಸ್ತಕಗಳಲ್ಲಿ ಏನು ಓದಿದ್ದೆವೋ ಅವನ್ನ ಅಚ್ಚಗನ್ನಡದಲ್ಲಿ ಸೆಳೆಕಸುವಿನಲೆಗಳುಅಂತನೂ ಕರಿಬಹುದು!.


ಯಾರು ಈ ಸುದ್ದಿ ಸಾರಿದ್ದು?
ಗುರುತ್ವಾಕರ್ಷಣ ಅಲೆ' ಗಳನ್ನ ೨೦೧೫ ಸೆಪ್ಟೆಂಬರ್ ೧೫ ರಂದೇ ಪತ್ತೆ ಮಾಡಲಾಗಿತ್ತಾದರೂ, LIGO ನವರು ಫೆಬ್ರವರಿ ೧೧ರಂದು ಈ ವಿಷಯವನ್ನ ಎಲ್ರಿಗೂ ಸಾರಿದರು.

ಯಾರು ಕಂಡು ಹಿಡಿದಿದ್ದು ?
Laser Interferometer Gravitational-Wave Observatory (LIGO) ನವರು ಕಂಡು ಹಿಡಿದಿದ್ದು.

LIGO ಅನ್ನುವುದು ಬಾನಂಗಳದಲೆ (cosmic gravitational waves) ಗಳನ್ನು ಕಂಡುಹಿಡಿಯಲು ಮತ್ತು ಅವನ್ನ ಅಳತೆ ಮಾಡಲು ಹುಟ್ಟಿಕೊಂಡ ಒಂದು ವೀಕ್ಷಣಾಲಯ (observatory). ಅಮೆರಿಕಾದ ವಾಶಿಂಗ್ಟನ್ ಮತ್ತು ಲೂಸಿಯಾನ ಎಂಬ ಎರಡು ಕಡೆ ಸ್ತಾಪನೆಗೊಂಡಿರುವ - ಆದರೆ ಒಂದೇ ವೀಕ್ಷಣಾಲಯದಂತೆ ಕೆಲಸ ಮಾಡುವ ಒಂದು ಆಕಾಶ ವೀಕ್ಷಣಾಲಯ!.

California Institute of Technology ಮತ್ತು Massachusetts Institute of Technology ಅವರು ಸೇರಿಕೊಂಡು ನಡೆಸುವ ಈ ಆಕಾಶ ವೀಕ್ಷಣಾಲಯಕ್ಕೆ ಅಮೆರಿಕಾದ ಸರಕಾರೀ ಸಂಸ್ತೆಯಾದ National Foundation Research ಹಣಕಾಸಿನ ನೆರವು ಒದಗಿಸುತ್ತದೆ.
  
ಗುರುತ್ವಾಕರ್ಷಣ ಅಲೆಗಳುಅಂದ್ರೆ ಏನು ?
ಐಸಾಕ್ ನಿವ್ಟನ್ ನ ತಲೆ ಮೇಲೆ ಸೇಬು ಬಿದ್ದಿದ್ದು, ಆಮೇಲೆ ಅವ್ನು ಈ ಘಟನೆಯನ್ನೇ ತನ್ನ ಸಿದ್ದಾಂತಕ್ಕೆ ತಳಹದಿಯಾಗಿ ಬಳಸಿ, ಭೂಮಿ ಚಂದ್ರನ್ನ ಎಳೆದು ಇಟ್ಕೊಂಡಿರೋದನ್ನ, ಸೂರ್ಯ ಭೂಮಿನ ಎಳೆದಿಟ್ಕೋಡಿರೋದನ್ನ ವಿವರಿಸೋದಕ್ಕೆ ಬಳಸಿಕೊಂಡಿದ್ದು ನಿಮಗೆಲ್ಲ ಗೊತ್ತಿರೋ ವಿಷಯಾನೆ ಆಲ್ವಾ?. ಹಂಗೇ, ಈ ನಿವ್ಟನ್ ಏನಾದರೂ ನಮ್ಮೂರ್ಕಡೆನೇನಾದ್ರೂ ಹಾಗಿದ್ರೆ, ತೆಂಗಿನ್ಮರದ ಕೆಳಗೆ ಕೂತುಕೊಂಡಿದ್ರೆ ಏನಾಗಿರ್ತಿತ್ತು ಅಂತ ಊಹಿಸ್ಕೊಂಡು ನೀವೂ ನಮ್ತರಾನೆ ನಕ್ಕಿದ್ದೂ ಉಂಟಲ್ವ?!.

ಗ್ರಾವಿಟೆಶನ್ ಅನ್ನುವುದು ಒಂದು ಫೋರ್ಸ್ (force) ಅನ್ನುವ ನಿವ್ಟನ್ ನ ವಾದವನ್ನ ಒಪ್ಪದ ಐನ್ಸ್ಟೀನ್, ಈ ಗ್ರಾವಿಟಿ ಬಗ್ಗೆ ತನ್ನದೇ ಆದ ಸಿದ್ದಾಂತವನ್ನ ಮುಂದಿಟ್ಟ. ಮತ್ತು ಈ ಅಲೆಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ ಅಂತನೂ ಹೇಳಿದ. ಈಗಿನ ತಿಳುವಳಿಕೆಯ ಪ್ರಕಾರ, ಅಡ್ಡ ಬರುವ ಗಾಳಿ ದೂಳುಗಳಿಂದ ಶಕ್ತಿಗುಂದದೆ ಗುಪ್ತವಾಗಿ ಎಷ್ಟು ದೂರ ಬೇಕಾದರೂ ಚಲಿಸುವ ಈ ಅಲೆಗಳು, ತನ್ನ "ವೇಗ ಅತ್ವ ದಿಕ್ಕನ್ನ ಬದಲಾಯಿಸಿಕೊಂಡು ಚಲಿಸುತ್ತಿರುವ" ಯಾವುದೇ ವಸ್ತುವಿನಿಂದ ಹೊರಹೊಮ್ಮುತ್ತವೆ.


 ಗುರುತ್ವಾಕರ್ಷಣ ಅಲೆಗಳುಇನ್ನೂ ಸರಳವಾಗಿ! 
ನನ್ಗೊತ್ತು ಮೇಲಿನ ಸಾಲುಗಳು ನಿಮ್ಮ ತಲೆಮೇಲಿಂದ ಹಾರೋಯ್ತು ಅಂತ! ಈಗ ತಲೆಗೆ ಇಳಿಯೋತರ ಹೇಳ್ತೀನಿ ಕೇಳಿ!!

ಈ ಬ್ರಹ್ಮಾಂಡದ ವಿವರಣೆ ಕೊಡೋಕೆ ನಮ್ಮ ವಿಜ್ಞಾನಿಗಳು space and time (ದೇಶ ಕಾಲ) ಅನ್ನುವ ಪರಿಕಲ್ಪನೆಯನ್ನ ಬಳಸಿ ಕೊಳ್ತಾರೆ. ಮನೆ ಹೊರಗೆ”, ಮನೆ ಒಳಗೆಇವುಗಳ ನಡುವೆ ಇರುವ ವ್ಯತ್ಯಾಸ ಗಮಸಿಸಿ. ಇದರಿಂದ space ಅನ್ನೋ ಕಲ್ಪನೆಯನ್ನ ಅರ್ಥಮಾಡಿಕೊಳ್ಳಬಹುದು. ನಿನ್ನೆ”, “ಈವೊತ್ತು”, ಮತ್ತು ನಾಳೆಗಳ ವ್ಯತ್ಯಾಸಗಳನ್ನ ಊಹಿಸೋಕೊಳ್ಳಿ. ಇದು ನಮಗ time (ಕಾಲ) ಅನ್ನೋ ಕಲ್ಪನೆಯನ್ನ ಅರ್ಥ ಮಾಡಿಕೊಳ್ಳಲು ಸಹಾಯಮಾಡುತ್ತೆ.

space ಅಂಡ್ time ಅನ್ನೋ ಮೂಲಭೂತ ಕಲ್ಪನೆಗಳನ್ನ ಬಳಸಿಕೊಂಡು ನಮ್ಮ ವಿಜ್ಞಾನಿಗಳು ಈ ಬ್ರಹ್ಮಾಂಡದ ರಚನೆಯನ್ನ ವಿವರಿಸಲು ಪ್ರಯತ್ನಿಸುತ್ತಾರೆ. ಈ space ಅಂಡ್ time ಗಳು ಈ ಬ್ರಹ್ಮಾಂಡ ಅನ್ನೋ ಬಟ್ಟೆಯ ನೂಲುಗಳು.(Fabric of the cosmos). ಟೈಮ್ ಮತ್ತು ಸ್ಪೇಸ್ ಅನ್ನು ಬಟ್ಟೆಯಲ್ಲಿರೋ ಹತ್ತಿಯ ನೂಲುಗಳಂತೆ ಊಹಿಸಿಕೊಳ್ಳಿ ಎಲ್ಲ ತಿಳಿಯಾಗುತ್ತೆ!

ಬ್ರಹ್ಮಾಂಡದ ಟೈಮ್ ಅಂಡ್ ಸ್ಪೇಸ್ - ಬಟ್ಟೆಯ ನೂಲುಗಳ ಹೋಲಿಕೆ  
ಚಿತ್ರ ಸೆಲೆ : physicsworld.com 

ಬಟ್ಟೆ ಉದಾಹರಣೆ ಅರ್ಥ ಆಗ್ಲಿಲ್ಲ ಅಂದ್ರೆ ....  ಒಂದು ಶಾಂತವಾದ ಕೆರೆ ಊಹಿಸಿಕೊಳ್ಳಿ. ಅಲ್ಲಿ ಒಂದು ಕಲ್ಲನ್ನ ನೀರ್ ಮೇಲೆ ಎಸೆದರೆ, ನೀರಿನಲ್ಲಿ ಅಲೆಗಳು ಬರುತ್ತವೆ ಅಲ್ವಾ?. ದೊಡ್ಡ ಕಲ್ಲು ಎಸೆದರೆ ದೊಡ್ಡ ಅಲೆಗಳು!, ಚಿಕ್ಕ ಕಲ್ಲು ಎಸೆದರೆ ಚಿಕ್ಕ ಅಲೆಗಳು!!. ಅದೇ ಕಲ್ಲನ್ನು ಕೆರೆಯಲ್ಲಿ ಹತ್ತಿರ ಹೋಗಿ, ನಿಧಾನವಾಗಿ ಇಳಿಬಿಟ್ಟರೆ ಕಲ್ಲು ನೀರಿನ ಮೇಲೆ ಚಲಿಸದೆ ಇದ್ರೆ - ಅಲೆಗಳು ಬರ್ತಾವೆ? ಇಲ್ಲ ತಾನೇ?

ಕೆರೆ ಅನ್ನೋದು ಈ ಬ್ರಹ್ಮಾಂಡ. ಕೆರೆಯಲ್ಲಿರೋ ನೀರು ಈ space ಅಂಡ್ time. ಈ ಬ್ರಹ್ಮಾಂಡದಲ್ಲಿರೋ ವಿವಿಧ ಕಾಯಗಳು (ನಕ್ಷತ್ರಗಳು ಗ್ರಹಗಳು ಇತ್ಯಾದಿ) ನಾವು ಕೆರೆ ದ್ರುಷ್ಟಾಂತದಲ್ಲಿ ಬಳಸಿದ ಕಲ್ಲುಇದ್ದಂತೆ.

ನೀರಲ್ಲಿರೋ ಕಲ್ಲು ಚಲಿಸದೆ, ಒಂದೇ ಕಡೆ ಇದ್ರೆ ಅಲೆಗಳು ಬರುತ್ವ? ಇಲ್ಲ ತಾನೇ?. ಹಾಗೆನೇ, ಬ್ರಹ್ಮಾಂಡದಲ್ಲಿರೋ ಈ ಕಾಯಗಳು ತನ್ನ ದಿಕ್ಕನ ಬದಲಾಯಿಸೋಕೊಂಡು ಚಲಿಸದೆ ಇದ್ರೆ, ಅತ್ವ ತನ್ನ ವೇಗವನ್ನ ಬದಲಾಯಿಸೋಕೊಂಡು ಚಲಿಸದೆ ಇದ್ರೆ ಈ space ಅಂಡ್ time ಅನ್ನೋ ಕೆರೆಯಲ್ಲಿ ಅಲೆಗಳುಹುಟ್ಟಲ್ಲ. ಅದೇ ಈ ಕಾಯಗಳು ತನ್ನ ವೇಗ ಅತ್ವ ದಿಕ್ಕನ್ನ ಬದಲಾಯಿಸಿಕೊಂಡು ಚಲುಸ್ತಾ ಇದ್ರೆ ಈ “space ಅಂಡ್ time” ಅನ್ನೋ ಶಾಂತವಾದ ಕೆರೆಯಲ್ಲಿ ಅಲೆಗಳು (ripple) ಹುಟ್ಟುತ್ತವೆ. ಈ ಬ್ರಹ್ಮಾಂಡದಲ್ಲಿ ಹುಟ್ಟುವ ಈ ಅಲೆಗಳೇ ಗುರುತ್ವಾಕರ್ಷಣ ಅಲೆಗಳು (gravitational waves).

ನೀರ ಮೇಲಿನ ಅಲೆಗಳು
ಗುರುತ್ವಾಕರ್ಷಣೆಯ ಅಲೆಗಳು - ಕಲ್ಪನೆ 
         
ಈ ಸೆಳೆತದ ಅಲೆಗಳನ್ನ space ಅಂಡ್ time (ದೇಶ ಕಾಲ)ನ ಉಬ್ಬುತಗ್ಗುಗಳು ಎಂದು ಅರ್ಥ ಮಾಡಿಕೊಳ್ಳಬಹುದು! (curvatures in space and time). ನೀರಲ್ಲಿ ಅಲೆಗಳು ಹೇಗೆ ಚಲಿಸುತ್ತವೋ ಹಾಗೆಯೇ ಈ space ಅಂಡ್ time ಅನ್ನೋ ನೂಲುಗಳಿಂದ ಉಂಟಾಗಿರೋ ಬ್ರಹ್ಮಾಂಡದಲ್ಲಿ (cosmos) ಈ gravitation waves ಗಳು ಉಬ್ಬು ತಗ್ಗು (curvature) - ಗಳಂತೆ ಚಲಿಸುತ್ತವೆ. ನೀರಲ್ಲಿ ಉಂಟಾಗೋ ಒಂದು ಸುರುಳಿಯಕಾರದ ಅಲೆಯನ್ನ ಊಹಿಸಿಕೊಳ್ಳಿ ಎಲ್ಲ ಅರ್ಥ ಆಗುತ್ತೆ! 

ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಹೇಗೆ ಬಂತು?
ಒಂದು ವಸ್ತುವು ತನ್ನ ದಿಕ್ಕಿನಲ್ಲಿ ಬದಲಾವಣೆ ಮಾಡಿಕೊಂಡು ಚಲಿಸುತ್ತಿದ್ದರೆ ಅತ್ವ ತನ್ನ ವೇಗದಲ್ಲಿ ಬದಲಾವಣೆ (ಏರು ಅತ್ವ ಇಳಿತ) ಮಾಡಿಕೊಂಡು ಚಲಿಸುತ್ತಿದ್ದರೆ ಅಂತಹ ವಸ್ತುವು ಅಲೆಗಳನ್ನ ಹೊರಹಾಕುತ್ತವೆ ಎಂದು ನಾವು ಮೇಲೆ ನೋಡಿದ್ದೇವೆ. ಭೂಮಿ ಸೂರ್ಯನ ಸುತ್ತ” ಸುತ್ತುತ್ತಾ ಇರೋದ್ರಿಂದ ಅದರ ದಿಕ್ಕೂ ಬದಲಾಗ್ತಾನೆ ಇರುತ್ತದೆ. ಸತತವಾಗಿ ದಿಕ್ಕು ಬದಲಾಯಿಸಿಕೊಂಡು ಚಲಿಸುತ್ತಿರುವ ಭೂಮಿಯ ಮೈಯಿಂದ ಗುರುತ್ವಾಕರ್ಷಣ ಅಲೆಗಳು ಹೊರ ಹೊಮ್ಮುತ್ತವೆ. 

ಗುರುತ್ವಾಕರ್ಷಣ ಅಲೆಗಳು ಕಂಡು ಹಿಡಿಯುವಿಕೆ ಯಾಕೆ ಮುಖ್ಯ?
ಐನ್ಸ್ಟೀನ್ ಈ ಬಗ್ಗೆ ಮೊದಲು ಮಾತಾಡಿ ನೂರು ವರ್ಷ (1915)ಗಳಾಗಿದ್ರೂಈ ನಡುವೆ ಈ ಸೆಳೆತದ ಅಲೆಗಳ ಬಗ್ಗೆ ವಿಜ್ಞಾನದಲ್ಲಿ ಎಷ್ಟೆಲ್ಲಾ ಚರ್ಚೆಗಳಾಗಿದ್ರೂಇದುವರ್ಗೂ ಈ ಅಲೆಗಳನ್ನ ಪತ್ತೆ ಮಾಡಲು ಆಗಿರಲಿಲ್ಲ. ಮೊನ್ನೆ LIGO ನವರು ಈ ಅಲೆಗಳನ್ನ ಪತ್ತೆ ಮಾಡಿ ಈ ಹಿಂದಿನ ಎಲ್ಲ ಚರ್ಚೆಗಳಿಗೆ ಜೀವ ಒದಗಿಸಿದ್ದಾರೆ. ಒಂದು ವೇಳೆ ಈ ಅಲೆಗಳು ಇಲ್ಲ ಅಂತಾನೆ ಸಾಬೀತು ಆಗಿಬಿಟ್ಟಿದ್ದರೆ ಇಷ್ಟು ವರ್ಷಗಳ ಈ ವಿಜ್ಞಾನದ ಚರ್ಚೆಗಳು ಹೊಳೆಯಲ್ಲಿ ಹುಣಿಸೆ ಹಿಂಡಿದಂತೆ ನಿರುಪಯುಕ್ತವಾಗ್ತಾ ಇತ್ತು. ಆ ಸಂಬಂದಿತ ಸಿದ್ದಾಂತಗಳನೆಲ್ಲ ತಿಪ್ಪೆಗೆಸಿಯಬೇಕಾಗಿತ್ತು!

ಗುರುತ್ವಾಕರ್ಷಣ ಅಲೆಗಳ ಪತ್ತೆ ಮಾಡಿ ಅಳತೆ ಮಾಡುವುದರಿಂದ ಏನು ಲಾಭ?
ಈ ಅಲೆಗಳ ಪತ್ತೆ ಹಚ್ಚುವುದುಗಮನಿಸಿ ಅಳತೆ ಮಾಡುವುದು ಈ ಬ್ರಹ್ಮಾಂಡದ ಸೃಷ್ಟಿ ಮತ್ತು ವಿಕಾಸವನ್ನ ತಿಳಿಯಲು ಸಹಾಯ ಮಾಡುತ್ತದೆ. ಉದಾರಣೆಗೆ ಕಪ್ಪು ಕುಳಿಗಳನ್ನೇ ತೆಗೆದುಕೊಳ್ಳಿ. ಈ ಕುಳಿಗಳಿಂದ ಏನು ಅಂದ್ರೆ ಏನೂ ಹೊರಬರಲು ಸಾಧ್ಯವಿಲ್ಲ. ಬೆಳಕೂ ಸಹಾ ಈ ಕುಳಿಗಳಿಂದ ಹೊರಬರಕ್ಕೆ ಆಗದೆ ಇರೋದ್ರಿಂದ ಕುಳಿಗಳ ಬಗ್ಗೆ – ಬೆಳಕಿನ ಮೂಲಕ - ಏನೂ ಮಾಹಿತಿ ತಿಳಿಯಲು ಸಾಧ್ಯವಿಲ್ಲ. ತನ್ನ ದಿಕ್ಕು ಅತ್ವ ವೇಗವನ್ನ ಬದಲಾಯಿಸಿಕೊಂಡು ಈ ಕಪ್ಪು ಕುಳಿಗಳು ಚಲಿಸ್ತ ಇರೋದ್ರಿಂದ ಇವುಗಳು ಹೊರಹಾಕುವ ಇವುಗಳ gravitation waves ಗಳನ್ನ ನಾವು ಹಿಡಿದು ಅಳತೆಮಾಡಿದ್ದೇ ಆದ್ರೆ ಈ ಕುಳಿಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದೇ ರೀತಿ ಈ ಬ್ರಹ್ಮಾಂಡದ ವಿವಿಧ ಕಾಯಗಳ ಬಗ್ಗೆ ಹೆಚ್ಚಿನ ಮಾಹಿತಿನೂ ಪಡೆಯಬಹುದು.

ಮೊನ್ನೆ ನಡೆದಿದ್ದು ಏನು?
ಈ ಕಪ್ಪು ಕುಳಿಗಳಿಂದಬೆಳಕನ್ನೂ ಸೇರಿಸ್ಕೊಂಡು – ಏನೂ ಸಹಾ ಹೊರಬರದೆ ಇದ್ರೂಗ್ರಾವಿಟೇಶನ್ ಅಲೆಗಳು ಹೊರಬರುತ್ತವೆ ಅಂತ ನಾವು ನೋಡಿದ್ವಿ. ಸುಮಾರು ಬಿಲಿಯನ್ ವರ್ಷಗಳ ಹಿಂದೆ ಎರಡು ಕಪ್ಪು ಕುಳಿಗಳು ಒಂದಕ್ಕೊಂದು ಡಿಕ್ಕಿ ಹೊಡೆದದ್ದರಿಂದಲೇ ಉಂಟಾದ ಅಲೆಗಳುಅಂದು ಅಲ್ಲಿಂದ ಹೊರಟ ಆ ಅಲೆಗಳು ೨೦೧೫ ರಲ್ಲಿ ಇಲ್ಲಿ ಭೂಮಿಯಲ್ಲಿ LIGO ನವರ ಕೈಗೆ ಸಿಕ್ಕಿವೆ!. ಈ ಅಲೆಗಳನ್ನ ಪರೀಕ್ಷೆಗೆ ಒಳಪಡಿಸಿದ ಮೇಲೆ ತಿಳಿದಿದ್ದು ಇವು space ಅಂಡ್ time ಅನ್ನೋ ನೂಲು (fabric) ಗಳಲ್ಲಿ ಉಂಟಾದ ಸುಕ್ಕಿನ (warping)ನ ಮಾಹಿತಿ .

ಈ ಉಬ್ಬು ತಗ್ಗು (curvature in space and time) ಗಳೆ ಗುರುತ್ವಾಕರ್ಷಣ ಅಲೆಗಳು ಅಂತ ಈಗಾಗೆಲೇ ನಿಮಗೆ ಅರ್ಥ ಆಗಿದೆ ಅಲ್ವ!

ಸೆಳೆತ ಹೇಗೆ ಉಂಟಾಗುತ್ತೆ?    
ಒಂದು ವಸ್ತು ಇದೊಂದು ವಸ್ತುವನ್ನ ತನ್ನ ಬಳಿ ಎಳೆದು ಕೊಳ್ಳುವುದು ಸೆಳೆತ ಅನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಈ ಆಕರ್ಷಣೆ / attraction ಹೇಗೆ ಉಂಟಾಗುತ್ತೆ ಅಂತ ಯಾವತ್ತಾದ್ರು ಯೋಚನೆ ಮಾಡಿದೀರಾ?     
ಮೇಲೆ ಕೊಟ್ಟಿರುವ ಕೆರೆ ಉದಾಹರಣೆಯಲ್ಲಿಕಲ್ಲು ನೀರಿನ ಮೇಲೆ ಚಲಿಸದೆ ಇದ್ದರೆ ನೀರಿನಲ್ಲಿ ಅಲೆಗಳು ಉಂಟಾಗದೆ ಕೆರೆ ಶಾಂತವಾಗೇ ಇರುತ್ತೆ ಅಂತ ನೋಡಿದ್ವಿ. ಹಾಗೆಯೇ ಆಕಾಶ ಕಾಯಗಳಾದ ಕಪ್ಪುಕುಳಿನಕ್ಷತ್ರಗ್ರಹ ಇತ್ಯಾದಿಗಳು ತನ್ನ ವೇಗವನ್ನ ಬದಲಾಯಿಸಿಕೊಂಡು ಚಲಿಸದೆ ಇದ್ದರೆಅತ್ವ ತನ್ನ ದಿಕ್ಕನ್ನ ಬದಲಾಯಿಸಿಕೊಂಡು ಚಲಿಸದೆ ಇದ್ದರೆ        “ಹರವು-ಹೊತ್ತು” (space - time) ಗಳನ್ನ ನೂಲುಗಳಂತೆ ಹೊಂದಿರುವ ಈ ಬ್ರಹ್ಮಾಂಡದಲ್ಲೂ ಉಬ್ಬು ತಗ್ಗು ಗಳು (curvatures) ಉಂಟಾಗಲ್ಲ ಎಂದು ಮೇಲೆ ನೋಡಿದ್ದೀವಿ.

          ಈ space ಅಂಡ್ time ನ ತಗ್ಗನ್ನು ಊಹಿಸಿಕೊಳ್ಳಿ. ದೊಡ್ಡ ಕಾಯವು  ದೊಡ್ಡ ತಗ್ಗು (curvature) ಉಂಟು ಮಾಡುತ್ತೆಚಿಕ್ಕಕಾಯವು ಚಿಕ್ಕ ತಗ್ಗು ಉಂಟುಮಾಡುತ್ತವೆ ಅನ್ನುವುದೂ ನೆನೆಪಿರಲಿ. ಈ ತಗ್ಗಿನಲ್ಲಿ ಇಳಿಜಾರಿದೆ ಅಲ್ವಈ ತಗ್ಗಿನ ಇಳಿಜಾರು ಆ ಕಾಯದ ಹತ್ತಿರ ಹತ್ತಿರ ಹೋದಂತೆ ತುಂಬಾ ಹೆಚ್ಚಾಗುತ್ತಾ ಹೋಗುತ್ತೆ. ಕಾಯದಿಂದ ದೂರ ದೂರ ಹೋದಂತೆ ಕಡಿಮೆಯಾಗುತ್ತಾ ಹೋಗುತ್ತೆ ಅನ್ನುವುದನ್ನೂ ಗಮನಿಸಿ. ಈ ಆಕಾಶ ಕಾಯದಿಂತ ಉಂಟಾಗುವ ತಗ್ಗುತನ್ನ ಮತ್ತು ಹತ್ತಿರದ ಸಣ್ಣ ಕಾಯಗಳ ನಡುವೆ ಇಳಿಜಾರು ಉಂಟುಮಾಡಿ ಈ ಮೂಲಕ ಹತ್ತಿರದ ಕಾಯಗಳನ್ನ ತನ್ನೆಡೆಗೆ ಎಳೆದುಕೊಳ್ಳುತ್ತೆ. ತಗ್ಗು ಉಂಟುಮಾಡುವ ಕಾಯದ ಹತ್ರ ಹೋದಂತೆ ಇಳಿಜಾರೂ ಹೆಚ್ಚಾಗುವುದರಿಂದಅದು ಉಂಟಾಗುವ ಅಕರ್ಷಣೆಯೂ ಹೆಚ್ಚಾಗುತ್ತೆ.  ಇದಕ್ಕೆ ನದಿಯಲ್ಲಿರುವ ಸುಳಿಯ ಉದಾಹರಣೆ ತಗೋಬಹುದು. ಸುಳಿಯಿಂದ ಸ್ವಲ್ಪ ದೂರ ಇದ್ದರೆ ಆ ಅಲೆಗಳು ನಿಮ್ಮನ್ನ ತನ್ನೆಡೆಗೆ ಎಳಕೋತಾವಾದ್ರೂ ನೀವು ಅದರಿಂದ ತಪ್ಪಿಸಿಕೊಳ್ಳಬಹುದು ಆದ್ರೆ ನೀವೇನಾದ್ರೂ ಸುಳಿ ನಡುವೆ ಸಿಕ್ಕಾಕಿ ಕೊಂಡ್ರಂತೂ ಅಲ್ಲಿಂದ ಹೊರ ಬರುವ ಮಾತೇ ಇಲ್ಲ. ಯಾಕೆ ಅಂದ್ರೆ ಅಲ್ಲಿ ಸೆಳೆತ (ಇಳಿಜಾರು) ತುಂಬಾ ಹೆಚ್ಚಿರುತ್ತೆ.








ಈಗ ವಿಜ್ಞಾನದ ಭಾಷೆಯಲ್ಲಿ ಹೇಳ್ಬೇಕು ಅಂದ್ರೆ ... ಸ್ಪೇಸ್ ಅಂಡ್ ಟೈಮ್‌ನಲ್ಲಿ ಒಂದು ಆಕಾಶಕಾಯದಿಂದ ಆಗುವ ತಗ್ಗಿನಿಂದ (curvature in space ಅಂಡ್ time) ಆ ಕಾಯಕ್ಕೆ ಗುರುತ್ವಾಕರ್ಷಣ ಶಕ್ತಿ ಬಂದು ಅದು ಹತ್ತಿರದ ಇತರ ಕಾಯಗಳನ್ನ ತನ್ನೆಡೆಗೆ ಎಳೆದುಕೊಳ್ಳುತ್ತೆ. ತಗ್ಗಿನಿಂದ ಆಗುವ ಇಳಿಜಾರನ್ನು ಊಹಿಸ್ಕೊಳ್ಳಿ ಎಲ್ಲ ತಿಳಿಯಾಗುತ್ತೆ.  
   

LIGO ನವರು ಪ್ರಕಟಿಸಿದ ಸಂಶೋದನ ಬರಹವನ್ನ ಇಲ್ಲಿ ನೋಡಿ.
https://journals.aps.org/prl/pdf/10.1103/PhysRevLett.116.061102




Wednesday 10 February 2016

ವಾಣಿ ವಿಲಾಸ ಸಾಗರ /ಮಾರಿಕಣಿವೆ ಬಗ್ಗೆ ಒಂದು ಕುಡಿನೋಟ ---

ವಾಣಿ ವಿಲಾಸ ಸಾಗರ /ಮಾರಿಕಣಿವೆ ಬಗ್ಗೆ ಒಂದು ಕುಡಿನೋಟ ---
ಮಾರ್ಗ---ಚಿತ್ರದುರ್ಗ ಜಿಲ್ಲೆಯಿಂದ ೪೦ ಕಿ.ಮೀ.,
ಬೆಂಗಳೂರಿನಿಂದ-- ನಿಂದ  ಹೈವೆ ಮೂಲಕ ತುಮಕೂರು > ಸಿರ > ಹಿರಿಯೂರು ಅಲ್ಲಿ ಒಂದು ಆರ್ಚ್ ಇರುತ್ತೆ ವಾಣಿ ವಿಲಾಸ ಸಾಗರ ಅಲ್ಲಿ ಸ್ವಲ್ಪ ದೂರ ಮುಂದೆ ಹೋದ್ರೆ ಡ್ಯಾಮ್ ಸಿಗುತ್ತೆ.




ವಿವಿ ಸಾಗರ (ಮಾರಿ ಕಣಿವೆ)ಗೆ ನೀರಿನ ನೆಲೆ ವೇದಾವತಿ ನದಿ—-----

ಇದು ಭಾರತದ ಪ್ರಮುಖ ನದಿಗಳಲ್ಲಿ ಒಂದು. ಪೂರ್ವ ಸಹ್ಯಾದ್ರಿ ಘಟ್ಟಗಳಲ್ಲಿ  ವೇದ ಮತ್ತು ಅವತಿ ಎಂಬ ಎರೆಡು ನದಿಗಳು ಹುಟ್ಟುತ್ತವೆ ಮುಂದೆ ಪೂರ್ವ ಮುಖವಾಗಿ ಹರಿದು ಪುರ ಎಂಬ ಹತ್ತಿರ ವೇದವತಿಯಾಗಿ ಹರಿಯುತ್ತದೆ. ನಂತರ ಹಿರಿಯೂರಿನ ಕೂಡಲಹಳ್ಳಿ ಎಂಬಲ್ಲಿ ಸುವರ್ಣಮುಖಿ ಎಂಬ ಉಪನದಿ ವೇದವತಿಗೆ ಸೇರುತ್ತದೆ. ನಂತರ ಅದು ಹಿರಿಯೂರಿನ ಮೂಲಕ ಆಂದ್ರಪ್ರದೇಶದ ಕಡೆಗೆ ಹರಿದು ತುಂಗಾಭದ್ರಾ ನದಿ ಸೇರುತ್ತದೆ.

ವಾಣಿ ವಿಲಾಸ ಸಾಗರ (ಮಾರಿ ಕಣಿವೆ ಡ್ಯಾಮ್):--------------
ಈ ಮಾರಿಕಣಿವೆ ಡ್ಯಾoನ್ನು ವೇದವತಿ ನದಿಗೆ ಕಟ್ಟಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಅಣೆಕಟ್ಟನ್ನು ಸ್ಥಳೀಕರು ಮಾರಿಕಣಿವೆ ಎಂದು ಕರೆಯುತ್ತಾರೆ.ಈ ಜಲಾಶಯವು 30೦೦೦ ಎಕರೆ ಭೂಮಿಗೆ ನೀರು ಒದಗಿಸುತ್ತದೆ.ವೇದವತಿ ನದಿಗೆ ಅಡ್ಡಲಾಗಿ ಇದನ್ನು ಕಟ್ಟಲಾಗಿದೆ. ಇದು 150 ಅಡಿ ಅಗಲ, ಸುಮಾರು 1330 ಅಡಿ ಉದ್ದ,145 ಅಡಿ ಎತ್ತರವನ್ನು ಹೊಂದಿದೆ. ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು 1897 ರಲ್ಲಿ, ಮೈಸೂರು ರಾಜ ಕೆ.ಶೇಷಾದ್ರಿ ಅಯ್ಯರ್ ದಿವಾನರಿಂದ ಅರಭಿಸಲ್ಪಟ್ಟಿತು. ಅವರು ವೈಯುಕ್ತಿಕವಾಗಿ ಜಿಲ್ಲೆಗೆ ಭೇಟಿಕೊಟ್ಟು ಬರ ಪೀಡಿತ ಪ್ರದೇಶದಲ್ಲಿ ನೆರವಾಗಲು ನೀರಿನ ಸಂಗ್ರಹಕಗಳಿಲ್ಲದ್ದನ್ನು ಗಮನಿಸಿದರು. ಅವರ ಅನುಮೋದನೆಯ ಮೇರೆಗೆ ಅಣೆಕಟ್ಟಿನ ನಿರ್ಮಾಣ ಕಾರ್ಯ ಆರಂಭವಾಯಿತು.ಸುಮಾರು ಒಂಭತ್ತು ವರ್ಷಗಳ ನಂತರ 1907 ರಲ್ಲಿ ನಿರ್ಮಾಣ ಕೆಲಸ ಪೂರ್ಣಗೊಳ್ಳುತ್ತದೆ.1909 ಸ್ವತಂತ್ರ ಪೂರ್ವದಲ್ಲಿ ಶ್ರೀ ಕೃಷ್ಣ ರಾಜ ವಡೆಯರ್ 4 ,ಸರ್.ಎಮ್.ವಿಶ್ವೇಶ್ವರಯ್ಯ, ವಂದ್ ದಲಾಲ್ ರವರ ನೇತೃತ್ವದಲ್ಲಿ ಪೂರ್ಣಗೊಳ್ಳುತ್ತದೆ. ಮತ್ತು ಅಣೆಕಟ್ಟಿಗೆ ಕೃಷ್ಣರಾಜ ವಡೆಯರ್ ರ ತಾಯಿಯ ಹೆಸರನ್ನು ಇಡಲಾಯಿತು.

ಈಗ ಇದು ಸ್ಟೇಟ್ ಗವರ್ನಮೆಂಟ್ ಆಫ್ ಕರ್ನಾಟಕ, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲುಕ ಅಡಿ ಬರುತ್ತದೆ. ವಾಣಿ ವಿಲಾಸ ಸಾಗರ ಜಲಾಶಯವು ಚಿತ್ರದುರ್ಗ ಐತಿಹಾಸಿಕ ಜಿಲ್ಲೆಯ ದೊಡ್ಡ ಜಲಾಶಯ, ಸಂಪೂರ್ಣವಾಗಿ ತುಂಬಿದ ಇತಿಹಾಸವೂ ಈ ಡ್ಯಾಮ್ಗೆ ಇಲ್ಲ ಎನ್ನುವುದು ಅಲ್ಲಿನ ಜನರ ಅಳಲು.ಅದಕ್ಕೆ ಕಾರಣ ಅಸಮರ್ಪಕ ಮಳೆ.  107  ವರ್ಷಗಳ ಹಿಂದೆ ನಿರ್ಮಿಸಿದ ಅಣೆಕಟ್ಟು. ಇದುವರೆಗೂ ಇದು ತುಂಬಿ ತುಳುಕಿದ ಇತಿಹಾಸವೇ ಇಲ್ಲ. ಇಲ್ಲಿವರೆಗೆ ಲೆಕ್ಕದ ಪ್ರಕಾರ ಮಾರಿಕಣಿವೆ , 30tmcft  ನೀರು ಇರುತ್ತದೆ. ಇದರ ಸಂಗ್ರಹ ಸಾಮರ್ಥ್ಯ 145 ಅಡಿ ಎತ್ತರದ ಅಣೆಕಟ್ಟು. 1933 ರಲ್ಲಿ ಮಾತ್ರ ತುಂಬಿತ್ತು ಎಂದು ಹೇಳಲಾಗುತ್ತದೆ.ಪ್ರಸ್ತುತ, ನೀರಿನ ಮಟ್ಟದ 70 ಅಡಿ ಗಿಂತಲೂ ಕಮ್ಮಿ ಇದೆ. ಅನೇಕ ಸಂದರ್ಭಗಳಲ್ಲಿ, ಮಟ್ಟದ 100 ಅಡಿ ತಲುಪಿದೆ, ಆದರೆ 145 ಅಡಿ ಗಡಿ ಎಂದೂ ದಾಟಿಲ್ಲ.
ವಾಣಿ ವಿಲಾಸ ಸಾಗರ ಅಣೆಕಟ್ಟು ಖಂಡಿತವಾಗಿಯೂ ಒಂದು ವಾಸ್ತುಶಿಲ್ಪ, ಇಲ್ಲಿ ಸಿಮೆಂಟ್ ಬಳಸದೆ ಬರಿ ಗಾರೆಯಲ್ಲಿ ಕಟ್ಟಲಾಗಿದೆ. ಆದ್ದರಿಂದ ಇದು ಒಂದು ಹಳೆಯ ಕಾಲದ ಎಂಜಿನಿಯರಿಂಗ್ ಕೌತುಕದ ಒಂದು ಸುಂದರ ಉದಾಹರಣೆ. ಜೊತೆಗೆ ಮುಖ್ಯವಾಗಿ ಕೇಂದ್ರ ಕರ್ನಾಟಕ ಡೆಕ್ಕನ್ ಪ್ರದೇಶದ ಒಣ ಭೂಮಿಯಗೆ ಮತ್ತು  ಇದು ಸುತ್ತಮುತ್ತಲ ನಗರಗಳಲ್ಲಿ, ಪಟ್ಟಣಗಳಲ್ಲಿ ಹಾಗೂ ಗ್ರಾಮಗಳಲ್ಲಿ ಬಹಳಷ್ಟು ಕುಡಿಯುವ ನೀರನ್ನು ಮತ್ತು ವ್ಯವಸಾಯಕ್ಕೆ ನೀರನ್ನು ಸರಬರಾಜು ಮಾಡುತ್ತದೆ.

ವಿವಿ ಸಾಗರ (ಮಾರಿ ಕಣಿವೆ) ಅಣೆಕಟ್ಟಿನ ಪ್ರಭಾವದ ಚಿತ್ರಣ :---------
ಈ ಮಾರಿಕಣಿವೆ ಆಣೆಕಟ್ಟು ಚಾಲನೆಗೆ ಬಂದ ನಂತರ ಸ್ಥಳೀಯರು ವ್ಯವಸಾಯದಲ್ಲಿ ಬದಲಾವಣೆ ಮಾಡಿಕೊಂಡರು. ನೀರಿನ ಸಮರ್ಪಕ ಬಳಕೆಯಿಂದ ತೆಂಗು, ಅಡಿಕೆ, ಕಬ್ಬು, ಭತ್ತ, ಬೆಳೆಗಳಿಗೆ ಪ್ರಾಮುಖ್ಯತೆ ಕೊಟ್ಟರು. ಭತ್ತದ ಬೆಳೆಯಿಂದಾಗಿ ಮಂಡಕ್ಕಿ ಮಿಲ್ಗಳು ತಲೆಯೆತ್ತುತ್ತವೆ. ಅವರು ಬೆಳೆಯುವ ಕಬ್ಬಿನ ಪ್ರಭಾವ  ಹೇಗಿತ್ತೆಂದರೆ ಆ ತಾಲ್ಲುಕಿನಲ್ಲಿ ಒಂದು ಸಕ್ಕರೆ ಕಾರ್ಖಾನೆಯೇ ಸ್ಥಾಪನೆಯಾಗುತ್ತದೆ. ಆದರೆ ಇದು ಕಡಿಮೆ ಸಮಯಕ್ಕೆ ಮಾತ್ರ ಸೀಮಿತವಾಯ್ತು ಅನ್ನುವುದು ಕೂಡ ಅಸ್ಟೆ ನಿಜ.

ಅಲ್ಲಿಯೂ ಸಮಸ್ಯೆಗಳು ಪ್ರಾರಂಭವಾಗುತ್ತವೆ. ನಂತರದ ದಿನಗಳಲ್ಲಿ ಜಲಾಶಯಕ್ಕೆ ಬೇಕಾದ ಮಳೆ ಬರಲಿಲ್ಲ. ನೀರು ಖಾಲಿಯಾದ ಪ್ರದೇಶಗಳಲ್ಲಿ ಅತಿಯಾದ ಮರಳು ಗಣಿಗಾರಿಕೆ ಮತ್ತು ನೀರು ಖಾಲಿಯಾದ ಪ್ರದೇಶದ ಒತ್ತುವರಿ, ನೀರಿನ ಒಳಹರಿವು ಕಡಿಮೆಯಾಗಲು ಕಾರಣವಾಯಿತು. ಕಬ್ಬು ಬೆಳೆ ಕಡಿಮೆಯಾಗಿ ಸಕ್ಕರೆ ಕಾರ್ಖಾನೆ ಮುಚ್ಚುವ ಪರಿಸ್ಥಿತಿ ಬಂತು. ನಂತರ ರೈತರು ಬೇರೆ ರೀತಿಯ ಬೆಳೆ ಬೆಳೆಯಲಾರಂಭಿಸಿದರು. ನೀರಿನ ಪ್ರಮಾಣ ಇನ್ನು ಕಡಿಮೆಯಾದರೆ ಮುಂದೆ  ಇದು ಬರಿ ಪಳುವಳಿಕೆಯ ಡ್ಯಾಮ್ ರೀತಿ  ಪ್ರವಾಸೀ ತಾಣ ಅಸ್ಟೆ .

ಆಕರ್ಷಣೆಯ ಯಾತ್ರಾ ಸ್ಥಳವಾಗಿ ಮಾರಿಕಣಿವೆ -----
ವಿವಿ ಸಾಗರ ಆಣೆಕಟ್ಟು ಒಂದು ಶತಮಾನದಿಂದ ಒಂದು ಆಕರ್ಷಣೆಯ ಯಾತ್ರಾ ಸ್ಥಳವಾಗಿ ಮುಂದುವರೆದಿದೆ. ಇಲ್ಲಿ ಪ್ರಾಚೀನ ಭಾರತೀಯ ಔಷಧೀಯ ಸಸ್ಯಗಳ ಉದ್ಯಾನ ವನ್ನು ಇಲ್ಲಿ ಮಾಡಲಾಗಿದೆ. ಅರಣ್ಯ ಇಲಾಖೆಯು ಕೈಗೊಂಡ ಕಾಡು ವರ್ಧನೆಯ ಕೆಲಸಕ್ಕೆ ಪಂಚವಟಿ ಉದ್ಯಾನವನ ಗಳನ್ನು ತೆರೆದಿರುವುದು. ನೆರೆ ಅರಣ್ಯದ ಪುನರುತ್ತಾನಕ್ಕೆ ಆಧ್ಯತೆ, ವಾರಾಂತ್ಯದಲ್ಲಿ ಗೇಟ್ ವೇ ಸ್ಥಳ. ಪಂಚವಟಿ ಗಾರ್ಡನ್ ಔಷಧೀಯ ಸಸ್ಯಗಳು. ಸಾಂಸ್ಕೃತಿಕ ವಿಷಯಗಳನ್ನು ಪ್ರತಿಬಿಂಬಿಸುವ ಕಣಿವೆ ಮಾರಮ್ಮ ಗುಡಿ, ಮತ್ತು ಅದರ ಉತ್ಸವ. ಇಲ್ಲಿಗೆ ಭೇಟಿ ನೀಡಿರುವವರ ಸಂಖ್ಯೆಯನ್ನು ಹೆಚ್ಚಿಸಿವೆ.

ಕಣಿವೆ ಮಾರಮ್ಮ ದೇವಸ್ತಾನ ;------------
ಈ ಐತಿಹಾಸಿಕ ಗುಡಿಯು 14-15 ಶತಮಾನದ ವಿಜಯನಗರ ಆಳ್ವಿಕೆಯ ಕಾಲದಲ್ಲಿ ಆಗಿದ್ದು ಎಂದು ಹೇಳಲಾಗುತ್ತದೆ. ಈ ಗುಡಿಯ  ಪ್ರಭಾವದಿಂದಲೇ ಇರಬೇಕು, ಹೆಸರು ವಾಣಿ ವಿಲಾಸ ಸಾಗರ ಆದರೂ ಅಲ್ಲಿನ ಜನ ಮಾರಿಕಣಿವೆ ಎಂದೇ ಹೇಳುತ್ತಾರೆ. ಇಲ್ಲಿ ಪದ್ಮಾಸನ ಹಾಕಿ ಕುಳಿತಿರುವ ಕಣಿವೆ ಮಾರಮ್ಮ ದೇವಿಯನ್ನು ನೋಡಬಹುದು, ಅಕ್ಕ ಪಕ್ಕದಲ್ಲಿ ಆಕೆಯ ತಂಗಿಯಂದಿರು ಇದ್ದು ಅವುಗಳನ್ನು ಪೂಜಿಸಲಾಗುತ್ತದೆ. ಇವಲ್ಲದೆ ಅಲ್ಲಿ ಇನ್ನು ಕೆಲವು ದೇವರುಗಳನ್ನು ಕಾಣಬಹುದು.ಉದಾ-ಈಶ್ವರ, ಹನುಮಂತ, ನಾಗಪ್ಪ, ಹಲವು. ದಿನದಲ್ಲಿ ಬೆಳಿಗ್ಗೆ ,ಮದ್ಯಾನ್ನ ,ಸಾಯಂಕಾಲ,ರಾತ್ರಿ ಹೀಗೆ ನಾಲ್ಕು ಬಾರಿ ಪೂಜೆ ನಡೆಯುತ್ತದೆ.ನವರಾತ್ರಿ ಪೂಜೆ ಯನ್ನು ತುಂಬಾ ವಿಶಿಸ್ತವಾಗಿ ಆಚರಿಸುತ್ತಾರೆ. ವರ್ಷಕ್ಕೊಮ್ಮೆ ಮಾರ್ಚ್ ತಿಂಗಳಲ್ಲಿ ರಥೋತ್ಸವ ನಡೆಯುತ್ತದೆ. ಕರ್ನಾಟಕ ಜನ ಮತ್ತು ಅಂದ್ರ ಪ್ರದೇಶದ ಕೆಲವು ಭಾಗಗಳ ಜನರು ಈ ಜಾತ್ರೆಯಲ್ಲಿ ಸೇರುತ್ತಾರೆ. ಕೆಲವು ಕುಟುಂಬಗಳಿಗೆ ಈ ಕಣಿವೆ ಮಾರಮ್ಮ ಕುಲ ದೇವತೆಯು ಹೌದು. ಈ ಕುಟುಂಬಗಳ ಜನರು ಪಕ್ಕದಲ್ಲೇ ಇರುವ ವೇದಾವತಿ ನದಿಗೆ ವರ್ಷಕ್ಕೊಮ್ಮೆಯಾದರೂ ಇಲ್ಲಿ ಗಂಗಮ್ಮ ಪೂಜೆ ಮಾಡುತ್ತಾರೆ .ಇಲ್ಲವೇ ವಿಶೇಷ ಸಂದರ್ಭಗಳಲ್ಲಿ, ಮದುವೆ, ಮುಂಜಿ, ಮೈ ನೆರೆದ ಹೆಣ್ಣುಮಕ್ಕಳಿಗೆ ಸೂತಕ ತೆಗೆಯಲು, ಹಬ್ಬ-ಹರಿದಿನಗಳಲ್ಲಿ ,ಮದುವೆಯಾದ ನವ ದಂಪತಿಗಳು ಮೊದಲ ಭೇಟಿಯಲ್ಲಿ ಇಲ್ಲಿ ಗಂಗಮ್ಮ ಪೂಜೆ ಮಾಡುತ್ತಾರೆ.