Friday, 27 November 2015

ಕಾಪೀ ಆಯ್ತು .. ಈಗ ಟೀ ಪುರಾಣ!

ಈಗಾಗ್ಲೇ ಕಾಪಿ ಬಗ್ಗೆ ಬರ್ದೇ. ಅದು ಇಲ್ಲಿದೆ. http://sunitacm.blogspot.in/2015/11/blog-post.html  .. ಇದೇ ಹುರುಪಲ್ಲಿ ಟೀ ಬಗ್ಗೆನೂ ಬರಿಯೋಣ ಅನ್ಸಿದ್ದಕ್ಕೆ ಈ ಬ್ಲಾಗು!
ಪ್ರಪಂಚದ ಅನೇಕ ಭಾಗಗಳಲ್ಲಿ ಟೀ ಎನ್ನುವುದು ಸಾವಿರಾರು ವರ್ಷಗಳಿಂದಲು ದಿನನಿತ್ಯದ ಪಾನೀಯವಾಗಿದೆ. ಇದು ಮೂಲಭೂತವಾಗಿ ಚೈನಾದ್ದು ಎಂದು ಹೇಳಲಾಗುತ್ತದೆ. ಅವರು ಸುಮಾರು 4೦೦೦ ವರ್ಷರಳ ಹಿಂದೆಯೇ ಟೀ ಕುಡಿಯುವುದನ್ನು ಕಲಿತಿದ್ದರು. ಅದಾದ ಹಲವಾರು ಶತಮಾನಗಳ ನಂತರ ಯುರೋಪ್ಗೆ  ಕಡಲ ವ್ಯಾಪಾರಿಗಳ ಮೂಲಕ ತಲುಪಿತು. ನಂತರ ಜಗತ್ ಪ್ರಸಿದ್ದಿ ಹೊಂದಿತು. ನಾರ್ತ್ ಅಮೇರಿಕಾ ಮತ್ತು ಯೌರೋಪ್ ನ ದೇಶಗಳಲ್ಲಿ ೧೮ ನೆ ಶತಮಾನದ ಪ್ರಿಯವಾದ ದೈನಂದಿನ ಪಾನೀಯವಾಗಿ ಪ್ರಸಿದ್ಧವಾಯಿತು. ಆ ಸಮಯದಲ್ಲಿ ಟೀ ಮಾರುವ ಏಕೈಕ ದೇಶ ಚೈನಾ ಆಗಿತ್ತು. ಇತ್ತೀಚೆಗಂತು ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಟೀ-ಪಾರ್ಟಿ ಎಂಬ ಅನೇಕ ಸಮಾರಂಭಗಳು ನಡೆಯುತ್ತವೆ. ಹೀಗೆ ಟೀ, ಪ್ರತಿಷ್ಟೆಯ, ಗೌರವಯುತ  ಸಮಾರಂಭಗಳಲ್ಲಿ ಸ್ತಾನ ಪಡೆಯಿತು. ಉದಾಹರಣೆಗೆ--- tea was also figured in america’s bid for independence form british rule-the boston tea party.

ಟೀ ಭಾರತ ಕ್ಕೆ ಬಂದಿದ್ದು,,,,,,,
ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಮಯದಲ್ಲಿ, ಅವರು ಅಸ್ಸಾಂ ನಲ್ಲಿ ಟೀ ಎಲೆಗಳನ್ನು ಗುರುತಿಸುತ್ತಾರೆ. ಜೊತೆಗೆ ಅಸ್ಸಾಂ ಎಲೆಗಳು ತುಂಬಾ ವಿಶೇಷವಾದ ರುಚಿಯನ್ನು ಹೊಂದಿದ್ದವು. ಅವರು ನಂತರ ಅದನ್ನು ಅದೇ ರೀತಿಯ ಹವಾಗುಣವಿರುವ ಅನೇಕ ರಾಜ್ಯಗಳಲ್ಲಿ ಬೆಳೆಯಲು ಉತ್ತೇಜನ ನೀಡಿದರು. ನಂತರ ಶ್ರೀಲಂಕ ವರೆಗೂ ಹೋಯಿತು. ಬರು ಬರುತ್ತಾ ಟೀ ಒಂದು ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿತು.ಟೀ ಯನ್ನು ವಂಡರ್ಫುಲ್ ಡ್ರಿಂಕ್ ಎಂತಲೂ ಕರೆಯುತ್ತಾರೆ!!!!!!!!!!!
1989ರಲ್ಲಿ ಜಪಾನಿನ ನ್ಯುಟ್ರಶಿಯನ್ ಸ್ಟಡಿ ಪ್ರಕಾರ,  ಲೋಯರ್ ಸ್ಟಮಕ್ ಕ್ಯಾನ್ಸರ್ ಕಾಯಿಲೆಯು ಟೀ ಕುಡಿಯುವ ಜನಾಂಗದವರಿಗಿಂತ ಟೀ ಕುಡಿಯದವರಲ್ಲಿ ಹೆಚ್ಹಾಗಿ ಕಂಡುಬಂದಿತ್ತು ಎಂದು ವರದಿಯಾಗಿತ್ತು. ಟೀ ಆರೋಗ್ಯಕರ ಗುಣಗಳೆಂದರೆ ನಮ್ಮ ದೇಹದಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಬ್ಯಾಡ್  ಕೊಲೆಸ್ತ್ರೋಲ್ ಲೆವೆಲ್ ಕಮ್ಮಿ ಮಾಡುತ್ತದೆ. ಲೋಯರ್ ಸ್ಟಮಕ್ ಕ್ಯಾನ್ಸರ್ ಬರದಂತೆ ಕಾಯುತ್ತದೆ. ಇದು ನ್ಯಾಚುರಲ್ ಫ್ಲೋರೈಡ ಹೊಂದಿರುವುದರಿಂದ ಹಲ್ಲು ಮತ್ತು ಮೂಳೆಗಳನ್ನು ಆರೋಗ್ಯದಿಂದಿರಿಸುತ್ತದೆ.

ಟೀ ಸೊಪ್ಪು ತಯಾರಿಸುವ ರೀತಿ,,,,
ಟೀ ಪ್ಲಾಂಟೇಶನ್ ಗಳಿಂದ ಟೀ ಎಲೆ, ಚಿಗುರನ್ನು ಕೀಳಲಾಗುತ್ತದೆ. ಅವುಗಳನ್ನು ನಿಗದಿತ ತಾಪಮಾನದಲ್ಲಿ ಒಣಗಿಸಿ ಪುಡಿಮಾಡಿ ಪ್ಯಾಕ್ ಮಾಡಿ ನಮಗೆ ಕಳಿಸುತ್ತಾರೆ. ಟೀ ಯನ್ನು 2 ರೀತಿಯಲ್ಲಿ ಬಳಸಲಾಗುತ್ತದೆ. 1 ಬ್ಲಾಕ್ ಟೀ, 2 ಗ್ರೀನ್ ಟೀ.

ಟೀ ಕುಡಿಯುವ ವಿಧಾನಗಳು,,,,
ಟೀ ಕುಡಿಯುವ ರೀತಿಯಲ್ಲಿಯೂ ಅನೇಕ ಬದಲಾವಣೆಗಳನ್ನು ಗುರುತಿಸಬಹುದು. ಚೈನಾದವರು ಬಿಸಿನೀರಿನೊಡನೆ ಟೀ ಸೊಪ್ಪು, ಜೊತೆಗೆ  ಕೆಲವು ಮೂಲಿಕೆಗಳನ್ನೂ ಸೇರಿಸಿ ಕುಡಿಯಲಾರಂಭಿಸಿದರು. ಆಯಾ ದೇಶದ ಹವಾಗುಣಕ್ಕೆ ಸಂಸ್ಕೃತಿಗೆ ತಕ್ಕಂತೆ ಟೀ ಮಾಡುವ ವಿಧಾನಗಳೂ ಬದಲಾದವು. ಉದಾಹರಣೆಗೆ ಏಲಕ್ಕಿ, ಲವಂಗ, ಚೆಕ್ಕೆ, ಜೀರಿಗೆ, ಕೊತ್ತಂಬರಿ, ಮೆಣಸು  ರೀತಿಯ ಮಸಾಲೆಗಳನ್ನು ಸೇರಿಸಿ ಟೀ ಬಳಸಲಾರಂಭಿಸಿದರು, ಅದೇ ರೀತಿಯಲ್ಲಿ ಕೆಲವು ಗಿದಮೂಲಿಕೆಗಳಾದ ಶುಂಟಿ, ತುಳಸಿ, ನಿಂಬೆ ಸೇರಿಸಿಯು ಟೀ ಕುಡಿಯುತ್ತಾರೆ. ಭಾರತದಲ್ಲಿ ನಾವು ಟೀ ಎಲೆಯ ಜೊತೆಗೆ ಹಾಲು ಸಕ್ಕರೆ ಮಿಕ್ಸ್ ಮಾಡಿ ಕುಡಿಯುವುದೇ ಹೆಚ್ಹು ಜನಪ್ರಿಯ. 
ಇವೆಲ್ಲ ಒಂದು ಬಗೆಯ ಟೀಗಳಾದರೆ, ಪಶ್ಚಿಮ ಸೂಡನ್ನಿನ  ಸಹಾರ ಮರುಭೂಮಿಯ ಜನಾಂಗದವರು sesame ಎಣ್ಣೆಯನ್ನು ಹಾಲು ಮಿಶ್ರಿತ ಟೀಗೆ ಬೆರೆಸಿ ಬೆಳಗಿನ ಪಾನೀಯವಾಗಿ ಸೇವಿಸುತ್ತಾರೆ. ಇಂಗ್ಲೆಂಡ್ ನಲ್ಲಿ ಟೀಯು ಅರೋಗ್ಯಾದಾಯಕ ಮತ್ತು ಗೌರವದಾಯಕ ಸ್ಥಾನ  ಪಡೆದಿದೆ. ಯುರೋಪ್, ಅರಬ್, ಪ್ಯಾರಿಸ್, ರಸಿಯಾ ದೇಶಗಳಲ್ಲಿ ಅರೋಗ್ಯ ಕೊಡುವ ಅಮೃತದಂತಾಗಿದೆ. ಇಂದಿನ ದಿನಗಳಲ್ಲಿ  ಗ್ರೀನ್ ಟೀ ಜೊತೆಗೆ ಜೇನುತುಪ್ಪ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ದೇಹದ ಮೆಟಾಬೋಲಿಸಮ್ ನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ ಮತ್ತು ದೇಹದ ತೂಕವನ್ನು ಕಮ್ಮಿ ಮಾಡುತ್ತದೆ, ರಕ್ತದಲ್ಲಿರುವ ಬ್ಯಾಡ್ ಕೊಲೆಸ್ತ್ರೋಲ್ ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಎಂದು ಡಯಟಿಶಿಯನ್ನರು ಹೇಳುತ್ತಾರೆ.


ಒಬ್ಬ ಡಚ್ ಫಿಸಿಶಿಯನ್, Cornelius blankaart , ದಿನದಲ್ಲಿ ನಾವು 8 ರಿಂದ 10 ಕಪ್ ಕಾಫಿ ಕುಡಿದರೆ ಅದು ತುಂಬಾ ಆರೋಗ್ಯದಾಯಕ ಅದಕ್ಕಿಂತ ಜಾಸ್ತಿ ಕುಡಿದರೀ ಅದು ಹಾನಿಕಾರಕ ಎಂದು ಹೇಳಿದ್ದಾರೆ. ಯಾವುದೇ ಅಗಲಿ ಅತಿಯಾದರೆ ಅಮೃತವೂ ವಿಷವಾಗುತ್ತದೆ. ಟೀ ಕುಡಿಯುವುದು ಚಟವಾಗಿ ಅತಿಯಾದರೆ ಮೂಳೆಸವೆತ, ನಿದ್ರಾಹೀನತೆ ಉಂಟಾಗುತ್ತದೆ. ನಾವು ನಮ್ಮ ಎಷ್ಟು ಬೇಕೋ ಅಸ್ಟು ಮಿತವಾಗಿ ಬಳಸಿ ಆರೋಗ್ಯದಿಂದ ಬದುಕು ನಡೆಸೋಣ.

ಟೀ ಕಾಫಿಯ ಸಾಮಾಚಾರ

                
ಇಂದು ಹೊರಗಡೆ ಸೈಕ್ಲೋನ್ ನಿಂದಾಗಿ ತುಂಬಾ ಮಳೆ. ಮನೆಯಲ್ಲಿರೋ ಎಲ್ಲ ವಸ್ತುಗಳೂ ತಣ್ಣಗಿವೆ, ಬಾಯಿಗೆ-ಮೈಗೆ ಏನಾದರೂ ಬೆಚ್ಚಗೆ ಮಾಡುವದನ್ನು ತಿನ್ನಬೇಕು ಅಥವಾ ಕುಡಿಬೇಕು ಅನುಸ್ತಿತ್ತು. ಬೋಂಡ-ಬಜ್ಜಿ ಮಾಡ್ಕೊಂಡು ತಿನ್ನಲು ತುಂಬಾ ಸಮಯ ಬೇಕು, ಅಲ್ಲದೆ ನೀರನ್ನು ಮುಟ್ಟಿ ಮಾಡಬೇಕು. ಆದ್ರೆ ಈ ಚಳೀಲಿ ನೀರು ಮುಟ್ಟೋದು ಆಗದ ಮಾತು.  ಅದು ಬೇಡ ಎನಿಸಿದಾಗ ತಲೆಗೆ ಥಟ್ಟನೆ ಹೊಳೆದದ್ದು ಟೀ ಅಥವಾ ಕಾಪೀ. ಹಾಗೇ ಅಡುಗೆ ಮನೆಗೆ ಹೋಗಿ ಬಿಸಿ ಬಿಸಿ ಸ್ಟ್ರಾಂಗ್ ಕಾಫಿ ಮಾಡ್ಕೊಂಡು ಕುಡಿದೆ. ಮನಸ್ಸಿಗೆ ಆದ ಅನುಭವ ಹೇಳಲಾಗುವುದೇ? ಆಹಾ! ಮನಸ್ಸಿಗೆ ಅದೆಷ್ಟು ಉತ್ಸಾಹ! ಉಲ್ಲಾಸ!! ಆಹ್ಲಾದ!!!, ಕೆಲವೊಂದು ಜಾಹೀರಾತುಗಳಲ್ಲಿ ಕಾಪೀ ಅತ್ವ ಟೀ ಕುಡಿದು ಅವರ ಎಕ್ಸ್ ಪ್ರೆಶನ್ ನೋಡಿ ನಗು ಬರುತಿತ್ತು. ಕೇವಲ ಒಂದು ಕಪ್ ಕಾಫೀ ಟೀ ಗೆ ಇಷ್ಟೊಂದು ಬಿಲ್ಡ್ ಅಪ್ ಬೇಕೇ? ಈ ರೀತಿ ಎಕ್ಸ್ಪ್ರೆಶನ್ಸ್ ಅವಶ್ಯಕತೆ ಇದೆಯಾ? ಎಂದು ಅಪಹಾಸ್ಯ ಮಾಡಿದ್ದೂ ಇದೆ. ಈಗ ಅದರ ಅರಿವಾಗುತ್ತಿದೆ.  ಅದು ಈಗ ನಿಜ ಎನಿಸುತ್ತಿದೆ. ರಿಯಲಿ ಕಾಫಿ / ಟೀ  ಕಂಡುಹಿಡಿದ ಮಹಾಶಯರಿಗೊಂದು ಸಲಾಂ


ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಯಾವುದೇ ಇರಲಿ ನಮ್ಮ ಬೆಳಗು ಶುರುವಾಗುವುದೇ ಕಾಫಿ/ ಟೀ ಮೂಲಕ. ನಮ್ಮ ಅಡುಗೆ ಮನೆಯ ಕೆಲಸಗಳಿಗೆ  ಕಾಫಿ/ ಟೀ ಗಳೇ ಶ್ರೀಕಾರ. ಮನೆಗೆ ಯಾರೇ ನೆಂಟರು ಬಂದರು ಅವರ ಉಪಚಾರ ಶುರುವಾಗುವುದೇ ಟೀ /ಕಾಪೀ? ಏನು ತಗೋತೀರ? ಅಂತಾನೇ. ಅಲ್ಲಿಯೂ ಅವು ಪ್ರಥಮ ಹಾಗೂ ರೂಢಿಯಾಗಿಬಿಟ್ಟಿವೆ. ಕೆಲವು ಮನೆಯವರ ಜಿಪುಣತನವನ್ನು ಹೇಳುವಾಗ “ಅಯ್ಯೋ! ಅವ್ರ ಮನೆಗೋದ್ರೆ ಆತಲಾ! ಅಷ್ಟೆಯ!! ಒಂದು ಲೋಟ ಟೀ ಕಾಪೀನೂ ಕೊಡಲ್ಲ. “ಅಂತ ವ್ಯಂಗ್ಯ ಮಾಡಿ ಮೂಗು ಮುರಿಯೋರುಂಟು. ಹೀಗೇ ನನ್ನ ಗೆಳತಿಗೆ ಮದುವೆಯಾದ ಮೇಲೆ ಕೆಲಸಕ್ಕೆ ಹೋಗಬೇಕೆನ್ನುವ ಆಸೇನ ಅವಳ ಗಂಡನಿಗೆ ಹೇಳುತ್ತಾಳೆ. ಹೆಂಡತಿ ಕೆಲಸಕ್ಕೆ ಹೋಗೋದು ಅವನಿಗೆ ಇಷ್ಟ ಇರಲಿಲ್ಲ ಅದನ್ನ ಹೇಗೆ ಜಾಣತನದಿಂದ ಹೇಳಿದ್ದ ಎಂದರೆ ನಾನು ಆಫೀಸ್ ನಿಂದ ಬಂದ ತಕ್ಷಣ ಒಂದು ಲೋಟ ಟೀನೋ / ಕಾಪಿನೋ ನಗುಮುಖದಿಂದ ಕೊಟ್ರೆ ಅದೇ ನೀನು ತರುವ ಸಂಬಳಕ್ಕಿಂತ ಹತ್ತುಪಟ್ಟು ಬೆಳೆಬಾಳುವಥದ್ದು ಎಂದು ಹೊಗಳಿಬಿಟ್ಟ, ತೊಗೋಳಿ ಅವತ್ತಿಂದ ಅವ್ಳು ಕೆಲ್ಸಕ್ಕೆ ಹೋಗೋ ಯೋಚನೇನೆ ಬಿಟ್ಟುಬಿಟ್ಟಳು. ಇಲ್ಲಿಯೂ ಟೀ/ ಕಾಫಿ  ಮಹತ್ವ ನೋಡಿ.

ಅದೇನೇ ಇರಲಿ, ಇಸ್ಟೊಂದು ನಾವು ಪ್ರೀತಿಸುವ ಕಾಫಿ/ ಟೀ ಪಾನೀಯಗಳು ನಮ್ಮ ಸಣ್ಣ ಪುಟ್ಟ ತಲೆ ನೋವು, ಮೈಕೈ ನೋವು, ನೆಗಡಿ ಕೆಮ್ಮು, ಕಫಾ  ಇಂಥಹವುಗಳಿಗೆ  ರಾಮಬಾಣವೂ ಹೌದು. ನಮ್ಮ ಹಿರಿಯರು ಹೆಲ್ತ್ ಡ್ರಿಂಕ್ಸ್ ಗೆ ಬದಲು ಮಳೆಗಾಲ ಚಳಿಗಾ ಲಗಳಲ್ಲಿ ಮಕ್ಕಳಿಗೆ ಕಾಫಿ /ಟೀ ಕುಡಿಸಲು ಹೇಳುತ್ತಾರೆ.

ಇಸ್ಟೆಲ್ಲ ಉಪಯೋಗಕಾರಿ ಮತ್ತು ನಮ್ಮ ನಿತ್ಯ ಸಂಗಾತಿ ಎನಿಸಿರುವ ಟೀ/ಕಾಫಿಯ ಬಗ್ಗೆ ಇನ್ನು ಹೆಚ್ಹು ತಿಳಿಯಬೇಕೆನಿಸಿ ಅಂತರ್ಜಾಲದಲ್ಲಿ ನಾನು ಓದಿದ ಕೆಲವು ವಿಷಯಗಳು.

ಕಾಫಿ ಬಗ್ಗೆ ನಾನು ಅಂತರ್ಜಾಲದಲ್ಲಿ ತಿಳಿದುಕೊಂಡ ವಿಚಾರಗಳು ;
ಕಾಫಿಯ ಪುರಾಣ ಕಥೆ ಶುರುವಾಗುವುದೇ ಇತಿಯೋಪಿಯದಿಂದ (ಈಗಿನ ಸೌತ್ ಆಫ್ರಿಕಾ). ಅಲ್ಲಿನ ಕಾಡಿನಲ್ಲಿ ಈ ಗಿಡಗಳು ಮೊಟ್ಟಮೊದಲು ಕಂಡುಬಂದವು .ಅಲ್ಲಿ ಒಬ್ಬ ಮೇಕೆ ಕಾಯುವವ khaldi ಎಂಬುವವನು ಇದನ್ನು ಗುರುತಿಸುತ್ತಾನೆ. ಹೇಗೆಂದರೆ, ಒಂದು ದಿನ ಆತನ ಮೇಕೆಗಳ ಗುಂಪು ಕಾಡಿನಲ್ಲಿ ಒಂದು ರೀತಿಯ ಗಿಡದ ಸೊಪ್ಪು, ಹಣ್ಣನ್ನು ಮೇಯ್ದು ಮನೆಗೆ ವಾಪಸಾದಾಗ ಆ ದಿನ ರಾತ್ರಿ  ಆ ಮೇಕೆಗಳು ನಿದ್ದೆಮಾಡದೆ ವಿಚಿತ್ರ ವರ್ತನೆಯಿಂದ ಇದ್ದದನ್ನು ಗಮನಿಸುತ್ತಾನೆ. ಹಾಗೇ ಮಾರನೇ ದಿನ ಮೇಕೆ ಹಿಂಡಿನ ಜೊತೆ ಹೋದಾಗ ತಾನೇ ಒಂದೆರೆಡು ಹಣ್ಣುಗಳನ್ನು ತಿಂದು ತನಗಾದ ವಿಚಿತ್ರ ಅನುಭವಕ್ಕೆ ಆಶ್ಚರ್ಯ ಪಡುತ್ತಾನೆ. ನಂತರ ತಾನು ಕಂಡ, ಪ್ರಯೋಗಿಸಿ ಅನುಭವಿಸಿದ ಗಿಡದ ಸೊಪ್ಪು ಮತ್ತು, ಹಣ್ಣಿನ ವಿಚಾರದ ಬಗ್ಗೆ ಆ ಊರಿನ ಸನ್ಯಾಸಿಗೆ ವಿಷಯವನ್ನು ತಿಳಿಸುತ್ತಾನೆ .ಆ ಸನ್ಯಾಸಿ ಆ ಬೀಜಗಳನ್ನು ತರಿಸಿ ಅದರಿಂದ ಒಂದು ರೀತಿಯ ಪಾನಕ ತಯಾರಿಸುತ್ತಾನೆ. ತಮ್ಮ ರಾತ್ರಿಪೂರ ನಡೆಯುವ ಪ್ರಾರ್ಥನಾ ಸಮಯದಲ್ಲಿ ಕುಡಿಯುವ ಪಾನಕವಾಗಿ ಪರಿಚಯಿಸುತ್ತಾನೆ. ಹಾಗೆ ಆ ಪಾನಕ ಆಧ್ಯಾತ್ಮಿಕ ಕಾರ್ಯಗಳಲ್ಲಿ ಜನಪ್ರಿಯತೆ ಪಡೆಯಿತು. ನಂತರ ಇಥಿಯೋಪಿಯದಿಂದ ಯೆಮೆನ್ ಗೆ, ಅಲ್ಲಿಂದ ಟರ್ಕಿ ಹೀಗೆ ಅದರ ಪ್ರಯಾಣ ಮುಂದುವರೆಯುತ್ತದೆ . ಆ ಪಾನಕವೇ ಇಂದಿನ ನಮ್ಮ ಅಚ್ಚು ಮೆಚ್ಚಿನ ಕಾಫಿ.


ಕಾಫಿಗಿಡ 14 ರಿಂದ 20 ಅಡಿಯವರೆಗೆ ಬೆಳೆಯುತ್ತವೆ. ಅದರ ಎಲೆ ಹಸಿರು, ಹೂವು ಬಿಳಿಯಾಗಿರುತ್ತವೆ. ಕಾಫಿ ಕಾಯಿಯೂ ಮೊದಲು ಹಸಿರಾಗಿದ್ದು ನಂತರ ಹಳದಿ / ಕೆಂಪು ಬಣ್ಣಕ್ಕೆ ತಿರುಗಿ ಹಣ್ಣಾಗುತ್ತವೆ. ಕೆಂಪು ಬಣ್ಣವಿದ್ದಾಗ ಅವುಗಳನ್ನು ಕಿತ್ತು ನೀರಿನಲ್ಲಿ ಹಾಕುತ್ತಾರೆ. ನೀರಿನಲ್ಲಿ ಮುಳುಗಿದ ಹಣ್ಣುಗಳು ಒಳ್ಳೆಯ ಗುಣಮಟ್ಟದವು ಎಂದು ಗುರುತಿಸುತ್ತಾರೆ. ಮುಂದೆ ಹಣ್ಣಿನಿಂದ ಒಳಗಡೆ ಇರುವ  ಬೀಜವನ್ನು ಬೇರ್ಪಡಿಸುತ್ತಾರೆ. ಆಗ ಅವು ನೀಲಿಮಿಶ್ರಿತ ಹಸಿರು ಬಣ್ಣ ಹೊಂದಿರುತ್ತವೆ. ಒಂದು ಹಣ್ಣಿನಲ್ಲಿ 2 ಕಾಫಿ ಬೀಜಗಳು ಸಿಗುತ್ತವೆ. ನಂತರ ಬೀಜಗಳನ್ನು ಹಳದಿ ಬಣ್ಣ ಬಂದು ಗಟ್ಟಿ ಆಗುವವರೆಗೆ ಒಣಗಿಸಿ ಸಂಸ್ಕರಿಸುತ್ತಾರೆ. ಆಮೇಲೆ 900 ಡಿಗ್ರಿ ತಾಪಮಾನದಲ್ಲಿ 17 ನಿಮಿಷಗಳ ಕಾಲ ಹುರಿಯುತ್ತಾರೆ, ನಂತರ ಹುರಿದ ಬೀಜಗಳನ್ನು ಪುಡಿಮಾಡಿ ಕಾಫಿ ಪುಡಿ ಮಾಡುತ್ತಾರೆ. ಕಾಫಿಯು ಕೆಪ್ಹೇನ್ ಅಂಶ ಹೊಂದಿರುತ್ತದೆ. ಹಸಿರು ಕಾಫಿ ಬೀಜಗಳಿಂದ ಕೆಫೇನ್ ಇಲ್ಲದ ಕಾಫಿ ಪುಡಿ ತಯಾರಿಸಲಾಗುತ್ತದೆ.

ಇಲ್ಲಿಯವರೆಗೆ 30 ಬಗೆಯ ಕಾಫಿ ಜಾತಿಯ ಗಿಡಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ರೊಬಸ್ಟ ಮತ್ತು ಅರೇಬಿಕ ಮತ್ತು ಇವುಗಳ ಒಳಗಿನ ಜಾಗದಾರಿತ ( geography) ಪ್ರಬೇಧಗಳು.  

ಅರಬ್ಬರು ಇಥಿಯೋಪಿಯಾಗೆ  ಪ್ರಯಾಣ ಬೆಳೆಸಿದಾಗ ಅರೇಬಿಯಾದ ಕಾಫಿ ಗಿಡವನ್ನು ಯೆಮೆನ್ನನ mocha ಎಂಬಲ್ಲಿ ನೆಡುತ್ತಾರೆ ಅದಕ್ಕೆ “quawah” ಎಂದು ಹೆಸರಿಡುತ್ತಾರೆ. ಇಲ್ಲಿ ಜನಪ್ರಿಯತೆ ಜಾಸ್ತಿಯಾದಂತೆ 1500ರ ಶತಮಾನದಲ್ಲಿ ಟರ್ಕಿಗೆ, 1600 ಶತಮಾನದಲ್ಲಿ ಇಟಲಿಗೆ ಸಾಗುತ್ತದೆ. ಕಾಫಿ ಬರೀ ಪಾನೀಯವಲ್ಲದೆ ವ್ಯಾಪಾರವಾಗಿ ತನ್ನ ಪ್ರಭಾವ ಬೀರಿ ಇಡೀ ಯುರೋಪನ್ನು ಆವರಿಸುತ್ತದೆ. 1714ರಲ್ಲಿ ಫ್ರೆಂಚ್ ಐಲ್ಯಾಂಡ್ ಒಂದರಲ್ಲಿ ಒಂದು ಗಿಡ ನೆಟ್ಟು ಪ್ರಯೋಗ ಮಾಡುತ್ತಾರೆ. ಅದರ ಬೆಳವಣಿಗೆ ಪರಿ ಹೇಗಿತ್ತೆಂದರೆ, ಆ ಒಂದು ಗಿಡದ ಪ್ರಯೋಗ ಇಡೀ ಮಧ್ಯ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾಗಳಲ್ಲಿ ಕಾಫಿ ಬೆಳೆಯಲು ಮುನ್ನುಡಿ ಹಾಕಿದಂತಿತ್ತು. ನಂತರ ಪೋರ್ಚುಗೀಸರು ಬ್ರೆಜಿಲ್ ನಲ್ಲಿ ಕಾಫಿ ಬೆಳೆಯಲಾರಂಭಿಸುತ್ತಾರೆ. ಇಂದು ಪ್ರಪಂಚದ 25% ಕಾಪಿಯನ್ನು ಬ್ರೆಜಿಲ್ ದೇಶವೇ ತಯಾರಿಸುತ್ತದೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾಗಳು ಮೂರನೇ ಎರಡರಷ್ಟು ಕಾಫಿ ಉತ್ಪಾದನೆ ಮಾಡುತ್ತವೆ. ಏಷ್ಯಾ ದೇಶಗಳಲ್ಲಿ ಜಾವಾ ಹೆಸರಿನ ಕಾಫಿಯನ್ನು ಬೆಳೆಯುತ್ತಾರೆ.

ಇತ್ತೀಚಿನ - ಆಧುನಿಕ ಯುಗದಲ್ಲಿ ಇಡೀ ಪ್ರಪಂಚದೆಲ್ಲೆಡೆ ಕಾಫಿ ಜನಪ್ರಿಯ ಪಾನೀಯವಾಗಿದೆ. ಕಾಫಿಗೆ starvalue ಬಂದಿದೆ ಎಂದು ಹೇಳಬಹುದು. ಕಾಪೀ ತನ್ನದೇ ಅದ ಒಂದು ಗ್ಲಾಮರ್ ಪಡೆಯುತ್ತಾ ಸಾಗುತ್ತಿದೆ. ಕಾಪೀ ಹೆಸರಿನಲ್ಲಿ ಅನೇಕ ಅಂಗಡಿಗಳು ತೆರೆದಿವು. ಹಲವು ಪಟ್ಟಣಗಳಲ್ಲಿ ಕಾಫಿ ಡೇ ಅಂಥಹ ಅಂಗಡಿಗಳು ಪ್ಯಾಟೆ ಜನರಿಗೆ ನಮ್ಮ ಹಳ್ಳಿಗಳ ಅರಳಿಕಟ್ಟೆಯ ರೀತಿ ಹರಟೆ ಹೊಡೆಯುವ, ಗಂಭೀರ ವಿಷಯ ಪ್ರಸ್ತಾಪಿಸಲು ಅವಕಾಶ ಕಲ್ಪಿಸಿಕೊಟ್ಟವು, ಹಾಗೇ ಜನಪ್ರಿಯತೆನ್ನೂ ಹೊಂದಿದವು. ಇತ್ತೀಚಿಗೆ ಕನ್ನಡದ ಒಂದು ಚಲನಚಿತ್ರದ ಹೆಸರು ಹೀಗಿತ್ತು “ಕಾಫಿ ವಿಥ್ ಮೈ ವೈಫ್” ಅಂತ.ಕಾಫಿ ಕುಡಿಯುವ ರೀತಿಗಳಲ್ಲೂ, ತಯಾರು ಮಾಡುವ ರೀತಿಗಳಲ್ಲೂ ಹಲವಾರು ವಿಧಗಳಿವೆ. ನಾವು ಮನೆಗಳಲ್ಲಿ ಇವನ್ನು ಮಾಡಿಕೊಳ್ಳಲು ಆಗುವುದಿಲ್ಲ. ಕಾಫಿ ಡೇ, ಕಾಫಿ ಶಾಪ್ಸ್ ಗಳಿಗೆ ಹೋಗಬೇಕು. ಕಾಫಿಗೆ ಕ್ರೀಂನಿಂದ ಅಲಂಕಾರ ಮಾಡಿ ಕುಡಿಯುವುದು, ಕೋಲ್ಡ್ ಕಾಫಿ, ಹಾಟ್ ಕಾಪೀ, ಮೈಲ್ಡ್ ಕಾಪಿ, ವೈಲ್ಡ್ ಕಾಫಿ, ಹಣ್ಣುಗಳ ಸುವಾಸನೆ ಇರುವ ಕಾಫಿ, ಓಹ್! ಇನ್ನೂ ಅನೇಕ.


ಕೆಲವೊಂದು ನಂಬಿಕೆಗಳ ಪ್ರಕಾರ, ಕಾಫಿ ಹೃದಯಕ್ಕೆ ಒಳ್ಳೆಯದು, ಚಳಿಗಾಲ ಮಳೆಗಾಲದಲ್ಲಿ ದೇಹಕ್ಕೆ ಬೆಚ್ಚನೆಯ ಅನುಭವ ಕೊಡುತ್ತದೆ. ಕೆಲವರು ತಮ್ಮ ಆಫೀಸ್ ಕೆಲಸಗಳ ಮಧ್ಯ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಕಾಫಿ ಕುಡಿಯುತ್ತಾರೆ. ಇಸ್ಟೆಲ್ಲಾ ಚೈತನ್ಯಕಾರಿಯಾದ ಕಾಫಿ ಕೆಫೇನ್ ಅಂಶ ಹೊಂದಿರುವುದರಿಂದ ಎಷ್ಟು ಬೇಕೋ ಅಸ್ಟು ಪ್ರಮಾಣದಲ್ಲಿ ಕುಡಿದರೆ ಒಳಿತು. ಅತೀ ಸೇವನೆ ಆರೋಗ್ಯಕ್ಕೆ  ಒಳ್ಳೆಯದಲ್ಲ.